ಕರ್ನಾಟಕ

karnataka

ETV Bharat / state

ವಿಜಯಪುರ: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ - ವಿಜಯಪುರ ಸುದ್ದಿ

ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕಸ್ಕಿ ವಸತಿ ಪ್ರದೇಶಗಳಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಹಾನಿಗೀಡಾದ ಪ್ರದೇಶಗಳನ್ನ ಸಚಿವೆ ಶಶಿಕಲಾ ಜೊಲ್ಲೆ ವೀಕ್ಷಣೆ ಮಾಡಿದರು.

Vijayapura District
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ

By

Published : Aug 16, 2020, 12:18 AM IST

ವಿಜಯಪುರ: ಇತ್ತೀಚೆಗೆ ಸುರಿದ ಮಹಾ ಮಳೆಯಿಂದ ಹಾನಿಗೀಡಾದ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು.

ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕಸ್ಕಿ ವಸತಿ ಪ್ರದೇಶಗಳಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಹಾನಿಗೀಡಾದ ಪ್ರದೇಶಗಳ ವೀಕ್ಷಣೆ ಮಾಡಿ ಮಾತನಾಡಿದ ಅವರು, ಒಂದೇ ದಿನ ಸುಮಾರು 220 ಮಿ.ಮಿ ಕ್ಕಿಂತ ಹೆಚ್ಚು ಮಳೆಯಾಗಿ ಈ ಭಾಗದ ಸುಮಾರು ತೋಟಗಾರಿಕೆಯ ಬೆಳೆ ಹಾನಿಯಾಗಿದೆ. ಕೆರೆ ಕಟ್ಟೆಗಳು ತುಂಬಿ ಹೊಲಗಳ ಬದುಗಳು ಹಾನಿಗೀಡಾಗಿವೆ ಈ ಕುರಿತು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಮಾಡುತ್ತಿವೆ. ಈಗಾಗಲೇ ಸುಮಾರು 70 ರಷ್ಟು ಸಮೀಕ್ಷೆ ಮಾಡಲಾಗಿದ್ದು, ಬಾಕಿ ಉಳಿದ ಸಮೀಕ್ಷೆ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಬೇಕು. ಹಾನಿಗೀಡಾದ ಕುರಿತು ಕೃಷಿ ಸಚಿವ ಹಾಗೂ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಹಾನಿ ಕುರಿತು ಮಾತನಾಡಿ ಶೀಘ್ರ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳುವುದಾಗಿ ಅವರು ರೈತರಿಗೆ ತಿಳಿಸಿದರು.

ಈಗಾಗಲೇ ರೈತರು ನಿರ್ಮಿಸಿಕೊಂಡು ಹಾಳಾಗಿರುವ ಕೃಷಿ ಹೊಂಡಗಳ ಕಾಮಗಾರಿಗಳನ್ನು ಪ್ರಥಮ ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಈ ಭಾಗದ ರೈತರು ಅತೀ ಹೆಚ್ಚು ಲಿಂಬೆ ಬೆಳೆ ಬೆಳೆಯುತ್ತಿದ್ದು. ರೈತರಿಗೆ ಸಮರ್ಪಕ ದರ ಸಿಗದಿದ್ದಾಗ ಲಿಂಬೆ ಬೆಳೆಯನ್ನು ಬಲಪಡಿಸಲು ಪರ್ಯಾಯ ಉತ್ಪನ್ನಗಳ ಬಳಸುವ ಕುರಿತು ರೈತರಿಗೆ ಮನವರಿಕೆ ಮಾಡುವ ಜೊತೆಗೆ ಈ ಕುರಿತು ಸಮಗ್ರ ಸಮೀಕ್ಷೆ ಸಹ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.

ಇತ್ತೀಚೆಗೆ ಕೃಷಿ ಸಚಿವರು ಬೆಳೆ ಸಮೀಕ್ಷೆ ಮಾಡುವ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿ ಆ ಆ್ಯಪ್​ನ್ನು ಬಿಡುಗಡೆ ಮಾಡಲಾಗಿದೆ. ರೈತರು ಆ ಆ್ಯಪ್​ಅನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಬೆಳೆದ ಬೆಳೆಯನ್ನು ತಾವೇ ಖುದ್ದಾಗಿ ಅದರಲ್ಲಿ ನಮೂದಿಸಬಹುದಾಗಿದೆ. ಆ್ಯಪ್ ಕುರಿತು ಅಧಿಕಾರಿಗಳು ರೈತರ ಹತ್ತಿರವೇ ಹೋಗಿ ಅದರ ಕುರಿತು ಮನವರಿಕೆ ಮಾಡಲಿದ್ದಾರೆ. ಎಲ್ಲ ರೈತರು ಈ ಆ್ಯಪ್ ಅಳವಡಿಸಿ ಕೊಳ್ಳಬೇಕೆಂದು ಅವರು ಹೇಳಿದರು.

ಉಪವಿಭಾಗಾಕಾರಿ ಸೋಮಲಿಂಗ ಗೆಣ್ಣೂರ, ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಮಹಾಂತೇಶ ಕವಟಗಿ, ದಯಾಸಾಗರ ಪಾಟೀಲ, ಆರ್.ಎಸ್ ಪಾಟೀಲ (ಕುಚಬಾಳ),ಕೃ ಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details