ವಿಜಯಪುರ:ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿ ಭಾಗದ ಚೆಕ್ಪೋಸ್ಟ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾರಾಷ್ಟ್ರದಿಂದ ರಾಜ್ಯದ ಗಡಿ ಪ್ರವೇಶ ಮಾಡುವವರ ತಪಾಸಣೆ ಬಗ್ಗೆ ಸಚಿವೆ ಜೊಲ್ಲೆ ವಿಜಯಪುರ ಎಸಿ ಬಲರಾಮ್ ಲಮಾಣಿ, ತಿಕೋಟಾ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿ, ತಪಾಸಣೆ ಇಲ್ಲದೇ ಯಾರನ್ನೂ ಒಳಬಿಡದಂತೆ ತಾಕೀತು ಮಾಡಿದರು. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾರಾಷ್ಟ್ರದ ಬಬಲಾದಿ ಗ್ರಾಮದ ಶಾಲೆಗೆ ವಿಜಯಪುರದಿಂದ ಹೋಗಿ ಬರುವ ಶಿಕ್ಷಕ ಗಿರೀಶ್ ಹಿರೇಮಠ ಅವರ ಬಳಿ ಗುರುತಿನ ಪತ್ರ ಇಲ್ಲದ ಕಾರಣ ಸಚಿವೆ ಕೋಪಗೊಂಡರು. ಚೆಕ್ ಪೋಸ್ಟ್ನಲ್ಲಿಯೇ ಶಿಕ್ಷಕನಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದು ವರದಿ ನೆಗೆಟಿವ್ ಬಂದಿದೆ. ನಾಳೆಯಿಂದ ಕಡ್ಡಾಯವಾಗಿ ಗುರುತಿನ ಪತ್ರ ತೆಗೆದುಕೊಂಡು ಹೋಗಬೇಕೆಂದು ಇದೇ ವೇಳೆ ಎಚ್ಚರಿಕೆ ನೀಡಿದರು. ಗುರುತಿನ ಪತ್ರ ಬಿಟ್ಟು ಬಂದಿದ್ದಕ್ಕಾಗಿ ಶಿಕ್ಷಕ ಸಚಿವೆ ಬಳಿ ಕ್ಷಮೆ ಕೋರಿದರು.
ಇದನ್ನೂ ಓದಿ:ಬೆಂಗಳೂರು: 117 ಕೆಜಿ ತೂಕ ಹೊಂದಿದ್ದ ಮಹಿಳೆಗೆ 2ನೇ ಬಾರಿ ಯಶಸ್ವಿ 'ಬೇರಿಯಾಟ್ರಿಕ್' ಶಸ್ತ್ರಚಿಕಿತ್ಸೆ..