ವಿಜಯಪುರ: ಸದ್ಯ ಮಾನವರಕ್ಷಕ ಚುಚ್ಚುಮದ್ದು ರೆಮಿಡೆಸನ್ ಔಷಧಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಸಿದರು.
ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಸಚಿವೆ ಜೊಲ್ಲೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸಿವರ್ ಔಷಧಿ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅದರ ಬೇಡಿಕೆ ಇದೆ, ಕೆಲವೊಮ್ಮೆ ಬರುತ್ತದೆ, ಕೊರತೆ ಸಹಿತ ಇದೆ ಎಂದು ಅಸಾಯಕತೆ ತೋಡಿಕೊಂಡರು.
ರೆಮಿಡಿಸಿವರ್ ಇದ್ದರೆ ನಮ್ಮ ಜೀವ ಬದುಕುತ್ತದೆ ಎಂಬುದು ರೋಗಿಗಳ ತಲೆಯಿಂದ ತೆಗೆದು ಹಾಕಬೇಕು. ಡಾಕ್ಟರ್ ಅದನ್ನು ನಿರ್ಣಯ ಮಾಡುತ್ತಾರೆ ಎಂದರು.
ಡಾಕ್ಟರ್ ಮಾರ್ಗದರ್ಶನದ ಅನ್ವಯ ರೆಮಿಡಿಸಿವರ್ ಕೊಡುವ ಕೆಲಸ ಮಾಡಲಾಗುತ್ತದೆ. ಜನರು ಗಾಬರಿಯಾಗಬಾರದು ಎಂದು ಸಚಿವೆ ಜೊಲ್ಲೆ ಹೇಳಿದರು.
ರೆಮಿಡಸನ್ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕ್ರಿಮಿನಲ್ ಕೇಸ್: ಸಚಿವೆ ಜೊಲ್ಲೆ ಕೆಲ ಸಿಬ್ಬಂದಿ ಶಾಮೀಲು: ಕೆಲ ಆಸ್ಪತ್ರೆ ಸಿಬ್ಬಂದಿ ರೆಮಿಡಿಸಿವರ್ ಔಷದಿ ದುರುಪಯೋಗಪಡೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣವನ್ನು ಸಹಿತ ದಾಖಲಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ದುರುಪಯೋಗ ಪಡೆಸಿಕೊಳ್ಳುವುದು ಮಾನವೀಯತೆ ಅಲ್ಲ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ: ನನಗೆ ನಿನ್ನೆಯಿಂದ ಬಹುತೇಕ ಕರೆಗಳು ಬರುತ್ತಿವೆ. ದಿನ ಬಳಕೆ ವಸ್ತುಗಳ ಬೆಲೆ ಮಾರ್ಕೇಟ್‌ನಲ್ಲಿ ಜಾಸ್ತಿ ಮಾಡುತ್ತಿದ್ದಾರೆ ಎಂದು ಕರೆಗಳು ಬರುತ್ತಿವೆ.
ಯಾರಾದರೂ ಹಾಗೆ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಲೈಸನ್ಸ್ ರದ್ದು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆ ಆಧಾರದ ಮೇಲೆ ವ್ಯಾಪಾರಸ್ಥರು ಈ ರೀತಿ ಮಾಡಬಾರದು ಎಂದು ಮನವಿ ಮಾಡಿದರು.
ಜಿಲ್ಲಾಡಳಿತದಲ್ಲಿ ಏನೇ ಕುಂದು ಕೊರತೆ ಇದ್ದರೂ ಅದನ್ನು ಪರಿಶೀಲಿಸಿ ಬಗೆ ಹರಿಸುತ್ತದೆ ಎನ್ನುವ ವಿಶ್ವಾಸವಿದೆ. ಈ ವಾರ ಪೂರ್ತಿ ತಾಲೂಕು ಮಟ್ಟದಲ್ಲಿ ಹೋಗಿ ಅಲ್ಲಿನ ಸಮಸ್ಯೆಗಳ ಕುರಿತು ತಾಲೂಕು ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದ ಅವರು, ವಾರಪೂರ್ತಿ ಜಿಲ್ಲೆಯಲ್ಲಿ ಠಿಕಾಣಿ ಹೊಡುವುದಾಗಿ ಕೆಲ ಸೋಮಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಆ್ಯಂಬುಲೆನ್ಸ್ ಸಮಸ್ಯೆ :ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆ್ಯಂಬಲೆನ್ಸ್ ಸಮಸ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವೆ ಜೊಲ್ಲೆ, ಆ್ಯಂಬುಲೆನ್ಸ್ ಸಮಸ್ಯೆ ಕುರಿತು ಕೂಡ ನನ್ನ ಗಮನಕ್ಕೆ ಬಂದಿದೆ. ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಬರುತ್ತಿಲ್ಲ ಎಂದು ದೂರುಗಳು ಬರುತ್ತಿವೆ.
ಖಾಸಗಿ ಅವರು ಸಹಿತ ಹೆಚ್ಚಿನ ಬೆಲೆ ಕೇಳುತ್ತಿದ್ದಾರೆ ಎಂಬ ದೂರುಗಳಿವೆ. ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಅಂತವರ ಮೇಲೆ ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸರ್ಕಾರಿ ಅಧಿಕಾರಿಗಳು ಸಹಿತ ತಪ್ಪು ಮಾಡಿದರೆ ಅವರ ವಿರುದ್ದ ನಿರ್ದಾಕ್ಷ್ಯಣ್ಯ ಕ್ರಮ ಜರುಗಿಸಲಾಗುವುದು ಎಂದುಎಚ್ಚರಿಕೆ ನೀಡಿದರು.
ಎರಡನೇ ಅಲೆ ಯುವಕರಿಗೆ ಆಪತ್ತು :ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಕರಣ ಹೆಚ್ಚಾಗುತ್ತವೆ. ಈ ಬಾರಿ ಯುವಕರಲ್ಲಿ ಸಹಿತ ಹೆಚ್ಚಿಗೆ ಪಾಸಿಟಿವ್ ಪ್ರಕರಣ ಕಂಡು ಬರುತ್ತಿವೆ. ಎರಡನೇ ಅಲೆಯಲ್ಲಿ ಎರಡರಿಂದ ಮೂರು ದಿನದಲ್ಲಿ ಕೋವಿಡ್ ಪೀಡಿತರು ಸೀರಿಯಸ್ ಸ್ಟೇಜ್‌ಗೆ ಹೋಗುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ 32 ಖಾಸಗಿ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿವೆ ಎಂದರು.
ಈಗ ಆಕ್ಸಿಜನ್ ಕೊರತೆ ಹಾಗೂ ರೆಮಿಡಿಸಿವರ್ ಹೀಗೆ ಕೆಲ ಸಮಸ್ಯೆಗಳು ಈಗ ಕಂಡು ಬರುತ್ತಿವೆ. ನಿನ್ನೆ ರಾತ್ರಿ ನಮಗೆ ಬೇಕಾಗಿರುವ 13 ಟನ್, ಎಲ್‌ಎಂಸಿ ಆಕ್ಸಿಜನ್ ಕುಲಕರ್ಣಿ ಗ್ಯಾಸ್ ಏಜೆನ್ಸಿ ಬಳ್ಳಾರಿಯಿಂದಲೂ ಪಡೆದುಕೊಳ್ಳುತ್ತೇವೆ ಎಂದರು.
ಅದರ ಜೊತೆಗೆ ವಿವಿಧ ಕಡೆಯ ದಾನಿಗಳು ಇದ್ದರು ಹಾಗೂ ಕಡಿಮೆ ದರದಲ್ಲಿ ಆಕ್ಸಿಜನ್ ಕೊಟ್ಟರು ತರುವ ಯೋಚನೆ ಜಿಲ್ಲಾಡಳಿತಕ್ಕೆ ಇದೆ ಎಂದ ಸಚಿವೆ ಜೊಲ್ಲೆ ಸ್ಪಷ್ಟಪಡಿಸಿದರು.