ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆಯ ವೀಕ್ಷಕರಾಗಿ ವಿಜಯಪುರಕ್ಕೆ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಇಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿದರು.

ವಿಜಯಪುರಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ
ವಿಜಯಪುರಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ

By ETV Bharat Karnataka Team

Published : Dec 26, 2023, 5:06 PM IST

Updated : Dec 26, 2023, 10:57 PM IST

ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

ವಿಜಯಪುರ: ಲೋಕಸಭಾ ಚುನಾವಣೆಯ ವೀಕ್ಷಕರಾಗಿ ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯ ವೀಕ್ಷಕರಾಗಿ ವಿಜಯಪುರಕ್ಕೆ ಆಗಮಿಸಿರುವೆ. ಚುನಾವಣೆಗೆ ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್​ಗೆ ಕಳುಹಿಸಬೇಕಿತ್ತು. ಈಗಾಗಲೇ ಸ್ವಲ್ಪ ತಡವಾಗಿದೆ. ಯಾರು ಆಕಾಂಕ್ಷಿಗಳಿದ್ದಾರೋ ಅವರ ಲಿಸ್ಟ್ ಪಡೆಯುತ್ತೇವೆ. ಅವರು ಅರ್ಜಿ ಸಲ್ಲಿಸಿದ ಬಳಿಕ ಸ್ಥಳಿಯರಿದ್ದಾರೋ ಹೊರಗಿನವರಿದ್ದಾರೋ ಎಂಬುದು ಗೊತ್ತಾಗಲಿದೆ ಎಂದರು.

ರಾಜ್ಯದಲ್ಲಿ ಮೂವರು ಡಿಸಿಎಂ ವಿಚಾರವಾಗಿ ಮಾತನಾಡುತ್ತಾ, ಸದ್ಯಕ್ಕೆ ಆ ಕುರಿತು ಪ್ರಪೋಸಲ್ ಇಲ್ಲ. ಬಂದಾಗ ಚರ್ಚೆ ಮಾಡೋಣ ಎಂದು ಹೇಳಿದರು. ರೆಬಲ್​ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಹಿಂದೆಯೂ ರೆಬಲ್ ಇಲ್ಲ, ಈಗಲೂ ರೆಬಲ್ ಇಲ್ಲ. ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂಬ‌ ಕುಮಾರಸ್ವಾಮಿ‌ ಹೇಳಿಕೆಗೆ, ಅವರು ಐದು ವರ್ಷಗಳವರೆಗೆ ಹಾಗೇ ಹೇಳುತ್ತಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ‌ ಜೆಡಿಎಸ್, ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎರಡು‌ ಶಕ್ತಿಗಳು ಒಂದಾದ ಕುರಿತಾಗಿ ವಿಚಾರ ಮಾಡಲೇಬೇಕಾಗುತ್ತದೆ. ಅದರ ಬಗ್ಗೆ ಪರಿಣಾಮಕಾರಿಯಾಗಿ ಚರ್ಚೆ ಮಾಡಬೇಕಿದೆ ಎಂದು ಸಚಿವ ಹೇಳಿದರು.

ಹಿಜಾಬ್ ವಿಚಾರದಲ್ಲಿ ಸಿದ್ದರಾಮಯ್ಯ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿ, ಸರ್ಕಾರದಲ್ಲಿ‌ ಸರಿಯಾದ ಸಮಯದಲ್ಲಿ ‌ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ವಿಚಾರವಾಗಿ ತಕ್ಷಣ ಏನೂ ಹೇಳಲು ಆಗಲ್ಲ, ಸಮಯ ಬಂದಾಗ ಹೇಳುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಹಿಂದೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇವು. ಅದನ್ನು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕೋವಿಡ್ ಅವ್ಯವಹಾರದ ಬಗ್ಗೆ ಶಾಸಕ ಯತ್ನಾಳ್ ಸ್ಪೋಟಕ ಹೇಳಿಕೆಗೆ, ಒಂದು ತನಿಖಾ ಟೀಂ ಮಾಡಲಾಗಿದೆ. ಆ ತಂಡ ತನಿಖೆ ಮಾಡಿದ ಬಳಿಕ ವರದಿ ನೀಡುತ್ತಾರೆ. ತದನಂತರ ಕೋವಿಡ್ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸಚಿವ ಸತೀಶ್ ಜಾರಿಕಿಹೊಳಿ ಹೇಳಿದರು.

ಇದನ್ನೂ ಓದಿ:FRUITS ಆ್ಯಪ್ ಮೂಲಕ ಬರ ಪರಿಹಾರ ವಿತರಣೆ: ಸಚಿವ ಕೃಷ್ಣ ಭೈರೇಗೌಡ

Last Updated : Dec 26, 2023, 10:57 PM IST

ABOUT THE AUTHOR

...view details