ಕರ್ನಾಟಕ

karnataka

ETV Bharat / state

ಶಾಸಕ ರವಿ ಗಣಿಗ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ: ಸತೀಶ್​ ಜಾರಕಿಹೊಳಿ - MLA Ravi Ganiga

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಶಾಸಕ ರವಿ ಗಣಿಗ ನೀಡಿದ ಹೇಳಿಕೆಗೆ ಸಚಿವ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

ಸಚಿವ ಸತೀಶ ಜಾರಕಿಹೊಳಿ
ಸಚಿವ ಸತೀಶ ಜಾರಕಿಹೊಳಿ

By ETV Bharat Karnataka Team

Published : Oct 30, 2023, 7:27 PM IST

Updated : Oct 30, 2023, 9:10 PM IST

ಸಚಿವ ಸತೀಶ ಜಾರಕಿಹೊಳಿ

ವಿಜಯಪುರ: ಎರಡೂವರೆ ವರ್ಷದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್​ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಶಾಸಕ ರವಿ ಗಣಿಗ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್​ ಅವರು ಈ ಬಗ್ಗೆ ಯಾರು ಯಾವ ಹೇಳಿಕೆಯನ್ನು ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಯಾವ ಹೇಳಿಕೆಯನ್ನು ನಾನು ನೀಡುವುದಿಲ್ಲ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಯಾವ ಗೊಂದಲವೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವೊಂದು ವಿಚಾರ ಪ್ರಸ್ತಾಪವಾಗಿವೆಯೇ ಹೊರತು ಅದು ಗೊಂದಲವಲ್ಲ. ಅದು ಅವರವರ ಅಭಿಪ್ರಾಯ ಆಗಿರಬಹುದಷ್ಟೇ ಎಂದರು.

ವಾಲ್ಮೀಕಿ ಸಮಾಜದ ಮುಖಂಡರಿಗೆ ಸರ್ಕಾರ ಚೇಂಜ್ ಮಾಡುವ ಶಕ್ತಿಯಿದೆ ಎನ್ನುವ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ರೀತಿ ಏಕೆ ಹೇಳಿದರೂ ಎಂಬುದು ಅವರನ್ನೇ ಕೇಳಬೇಕು. ಅವರ ಹೇಳಿಕೆ ಬಿಟ್ಟು ಬೇರೆ ಕೇಳಿ ಎಂದರು. ದುಬೈ ಟೂರ್ ವಿಚಾರವಾಗಿಯೂ ಮಾತನಾಡಿ, ಇದು ಒಂದು ಖಾಸಗಿ ಕಾರ್ಯಕ್ರಮ. ಶಾಸಕರು ಇದರಲ್ಲಿ ಯಾರೂ ಪಾಲ್ಗೊಳ್ಳುತ್ತಿಲ್ಲ. ತಾವು ಮಾತ್ರ ತೆರಳುತ್ತಿರುವುದಾಗಿ ಹೇಳಿದರು.

ಸಹೋದರನಿಗೆ ಟಾಂಗ್: ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬದಲಾವಣೆ ಆಗಲಿದೆ. ಡಿಕೆ ಶಿವಕುಮಾರ್​ ಮಾಜಿ ಮಂತ್ರಿ ಆಗಲಿದ್ದಾರೆ ಎಂದ ಮಾಜಿ ಸಚಿವ, ಸಹೋದರ ರಮೇಶ್​ ಜಾರಕಿಹೊಳಿ ಅವರ ಹೇಳಿಕೆಗೆ ಟಾಂಗ್ ನೀಡಿದ ಸಚಿವ ಸತೀಶ್​ ಜಾರಕಿಹೊಳಿ, ರಾಜ್ಯದಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬದಲಾಗಲ್ಲ. ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇರುತ್ತದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಇದೇ ಗ್ರಾಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​ ಸಿ ಮಹದೇವಪ್ಪ, ಕಾಂಗ್ರೆಸ್​ ಪಕ್ಷದಲ್ಲಿ ಒಂದೇ ಬಣ ಇದೆ. ಸಿಎಂ ಹುದ್ದೆ ಖಾಲಿ ಇಲ್ಲ. ಕೆಲ್ಸಕ್ಕೆ ಬಾರದವರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾರೋ ಕೆಲವರು ಸಿಎಂ ಅವರನ್ನು ಬದಲಾಯಿಸುವ ಕುರಿತು ಮಾತನಾಡುತ್ತಿದ್ದಾರೆ ಎಂದು ಟಾಂಗ್​ ಕೊಟ್ಟರು.

ಕಾವೇರಿ ನೀರು ಬಿಡುಗಡೆ ವಿಚಾರ:ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಭಾಗದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇದೆ, ಹೇಗೆ ನಿಭಾಯಿಸುತ್ತೆಂದು ಕಾದು ನೋಡೋಣ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಅಸಹಾಯಕವಾಗಿದ್ದು, ಸುಪ್ರೀಂ ಒತ್ತಡ, ಆದೇಶ ಮಾಡಬೇಕಾಗಿದೆ. ಅದರ ಹೊರತಾಗಿ ಸರ್ಕಾರ ಏನೂ ಮಾಡಲಾಗದು. ಕೇಂದ್ರದ ಬಳಿ ಎಷ್ಟೇ ಸಲ ನಿಯೋಗ ಕರೆದೊಯ್ದರೂ ಪ್ರಯೋಜನ ಇಲ್ಲ. ನ್ಯಾಯಾಂಗದ ಮೂಲಕವೇ ಹೋರಾಟ ಮಾಡಬೇಕು ಎಂದರು.

ಡಿಸಿಎಂ ಡಿಕೆ ಶಿವಕುಮಾರ್​ ಬಿಟ್ಟು ಗೃಹ ಸಚಿವ ಪರಮೇಶ್ವರ್​ ಸಭೆ ವಿಚಾರ ಮಾತನಾಡಿದ ಅವರು, ಇದಕ್ಕೆ ನಾನು ಏನು ಹೇಳಬೇಕು. ಸಭೆಯಲ್ಲಿ ನಾನೂ ಇದ್ದೆ ಎಂದರು. ಕಾಂಗ್ರೆಸ್ ಸರ್ಕಾರದಲ್ಲಿ ಒಗ್ಗಟ್ಟು ಇದೆ. ಹಾಗಾಗಿಯೇ ಸರ್ಕಾರ ರಚನೆ ಆಗಿದೆ. ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಇದೇ ವೇಳೆ ಸಿಎಂ ವರ್ಸಸ್ ಡಿಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಇದನ್ನು ಬಿಟ್ಟು ಬೇರೆ ಕೇಳಿ, ಎಲ್ಲ ಕಡೆಗೂ ಇದರ ಬಗ್ಗೆಯೇ ಕೇಳಲಾಗುತ್ತಿದೆ ಎಂದರು.

ಇದನ್ನೂ ಓದಿ:ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ, ಆದ್ರೆ ಸರ್ಕಾರ ಬೀಳಿಸಲು ಯತ್ನಿಸಲಾಗುತ್ತಿದೆ: ಸಿಎಂ ಸಿದ್ದರಾಮಯ್ಯ

Last Updated : Oct 30, 2023, 9:10 PM IST

ABOUT THE AUTHOR

...view details