ಬೀದರ್: ಹೊಸ ವರ್ಷವನ್ನು ಸ್ವಾಗತಿಸಲು ಅಭಿಮಾನಿಗಳು ಆಯೋಜಿಸಿದ ಸಂಭ್ರಮಾಚರಣೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೆಜ್ಜೆ ಹಾಕುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಹೊಸ ವರ್ಷದ ಸಂಭ್ರಮದಲ್ಲಿ ಪಶುಸಂಗೋಪನಾ ಸಚಿವರ ಸಖತ್ ಡ್ಯಾನ್ಸ್.!
ಹೊಸ ವರ್ಷದ ನಿಮಿತ್ತ ಬೀದರ್ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಚಿವ ಪ್ರಭು ಚವ್ಹಾಣ್ ಮೈ ಮರೆತು ಕುಣಿದರು.
ಸಚಿವ ಪ್ರಭು ಚವ್ಹಾಣ ಡ್ಯಾನ್ಸ್
ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡಾದ ನಿವಾಸದ ಮುಂದೆ ಅಭಿಮಾನಿಗಳು ತಡ ರಾತ್ರಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ 2021 ವರ್ಷಕ್ಕೆ ಸ್ವಾಗತಿಸಿದರು.
ಈ ವೇಳೆಯಲ್ಲಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಮನೆ ಎದುರಲ್ಲೇ ಹಾಕಲಾದ ಡಿಜೆ ಹಾಡಿಗೆ ಸಚಿವ ಪ್ರಭು ಚವ್ಹಾಣ್ ಮೈ ಮರೆತು ಹೆಜ್ಜೆ ಹಾಕಿದರು.