ವಿಜಯಪುರ:ತಾಂತ್ರಿಕ ದೃಷ್ಠಿಯಿಂದ ಖ್ಯಾತವಾಗಿರುವ, ಮುಳವಾಡ ಏತನೀರಾವರಿ ಯೋಜನೆಯ ತಿಡಗುಂದಿ ಶಾಖಾ ಕಾಲುವೆಗೆ ನಿರ್ಮಿಸಿರುವ ವಯಾಡಕ್ಟ್ ಕಾಮಗಾರಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ವೀಕ್ಷಿಸಿದರು.
ಮುಳವಾಡ ಏತನೀರಾವರಿ ಯೋಜನೆ ವೀಕ್ಷಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ - undefined
ಮುಳವಾಡ ಏತನೀರಾವರಿ ಯೋಜನೆ, ತಿಡಗುಂದಿ ಶಾಖಾ ಕಾಲುವೆಯ ಕಾಮಗಾರಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ವೀಕ್ಷಿಸಿದರು. ಜೊತೆಗೆ ಕಡಿಮೆ ಅವಧಿಯಲ್ಲಿ ಯೋಜನೆ ಮುಕ್ತಾಯ ಹಂತಕ್ಕೆ ತಲುಪಿರುವುದಕ್ಕೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು..
![ಮುಳವಾಡ ಏತನೀರಾವರಿ ಯೋಜನೆ ವೀಕ್ಷಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್](https://etvbharatimages.akamaized.net/etvbharat/prod-images/768-512-3515218-thumbnail-3x2-vjp.jpg)
ವಯಾಡಕ್ಟ್ (ಜಲಸೇತುವೆ) 0.0ಕಿ.ಮೀ ನಿಂದ ಹಿಡಿದು ಬುರಾಣಪುರ, ಐನಾಪುರ, ಅಲಿಯಾಬಾದ, ಹಂಚಿನಾಳ, ಭೂತನಾಳ ಗ್ರಾಮಗಳ ವ್ಯಾಪ್ತಿಯ ಕೊನೆಯ ತುದಿ 17.43ಕಿ.ಮೀ ವರೆಗೆ ಸೇತುವೆ ಉದ್ದಕ್ಕೂ ಪರಿವೀಕ್ಷಣೆ ನಡೆಸಿದರು. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ನಡೆಸಿ, 18 ತಿಂಗಳ ಕಾಮಗಾರಿಯನ್ನು ಕಡಿಮೆ ಅವಧಿಯಲ್ಲಿ ಮುಗಿಸುವ ಹಂತಕ್ಕೆ ತಲುಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೆಪ್ಟೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು ಎಂದು ಸೂಚಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪಾಟೀಲ್, ಪೂರ್ಣ ಕಾಮಗಾರಿಯನ್ನು 100 ದಿನದೊಳಗೆ ಪೂರ್ಣಗೊಳಿಸಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಅವರನ್ನು ಆಹ್ವಾನಿಸಿ ಜಲಸೇತುವೆ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.