ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿಗೆ ವಿದೇಶದಲ್ಲಿ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ತಾ? ಸಚಿವ ಎಂ ಬಿ ಪಾಟೀಲ್​ - ವಿದೇಶದಲ್ಲಿ ಸರ್ಕಾರ ಬೀಳಿಸಲು ಷಡ್ಯಂತ್ರ

ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂ ಬಿ ಪಾಟೀಲ್​, ಕುಮಾರಸ್ವಾಮಿ ಅವರಿಗೆ ವರ್ಗಾವಣೆ ಬಗ್ಗೆ ವಿದೇಶದಲ್ಲಿ ಮಾಹಿತಿ ಸಿಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ.

minister-mb-patil-slams-former-cm-hd-kumaraswamy
ಕುಮಾರಸ್ವಾಮಿಗೆ ವಿದೇಶದಲ್ಲಿ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ತಾ ? : ಸಚಿವ ಎಂ ಬಿ ಪಾಟೀಲ್​

By

Published : Aug 5, 2023, 8:31 PM IST

ಸಚಿವ ಎಂ ಬಿ ಪಾಟೀಲ್​ ಹೇಳಿಕೆ

ವಿಜಯಪುರ: ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಯವರಿಗೆ ವಿದೇಶದಲ್ಲಿ ವರ್ಗಾವಣೆ ಮಾಹಿತಿ ಸಿಕ್ತಾ? ಅವರಿಗೆ ವಿದೇಶದಲ್ಲಿ ಯಾರಾದರೂ ಮಾಹಿತಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ನಗರದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ಎಂಬುದು ಆಡಳಿತಾತ್ಮಕ ಪ್ರಕ್ರಿಯೆ. ಎಷ್ಟೋ ಬಾರಿ ವರ್ಗಾವಣೆಗಳು ನಡೆಯುತ್ತವೆ. ಪ್ರತಿ ಸರ್ಕಾರದಲ್ಲಿಯೂ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಏಕೆ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ವರ್ಗಾವಣೆ ಆಗಿಲ್ಲವೇ?. ಹಲವು ವರ್ಗಾವಣೆಗೆ ತಡೆಯಾಜ್ಞೆ ಬಂದಿಲ್ಲವೇ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಗೃಹಮಂತ್ರಿಯಾಗಿದ್ದೆ. ಅವರ ಕಾಲದಲ್ಲಿಯೂ ಸಾಕಷ್ಟು ವರ್ಗಾವಣೆಗೆ ತಡೆಯಾಜ್ಞೆ ಬಂದಿದೆ ಎಂದು ಹೇಳಿದರು.

ಈ ಹಿಂದೆ ಪೆನ್‌ಡ್ರೈವ್ ತೋರಿಸಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಆದರೆ ಪೆನ್ ಡ್ರೈವ್ ಮಾತ್ರ ಹೊರಗೆ ಬರಲಿಲ್ಲ. ಪೆನ್ನು ಇಲ್ಲಾ. ಡ್ರೈವ್ ಇಲ್ಲ ಎಂದು ವ್ಯಂಗ್ಯವಾಡಿದರು.

ವಿದೇಶದಲ್ಲಿ ಸರ್ಕಾರ ಬೀಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಸ್ವಾಮಿ ಅವರು ಮೊದಲು ತಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಿ. ಇಲ್ಲಿ ಇದ್ದುಕೊಂಡೇ ಇವರಿಗೆ ಏನು ಮಾಡಲು ಆಗುವುದಿಲ್ಲ, ಇನ್ನು ವಿದೇಶದಲ್ಲಿ ಕುಳಿತು ಏನು ಮಾಡುತ್ತಾರೆ. ನಮ್ಮ ಸರ್ಕಾರ ಸ್ಥಿರವಾಗಿದೆ. 136 ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಅವರಿಂದ ಏನು ಮಾಡಲು ಸಾಧ್ಯವಿಲ್ಲ. ಐದು ವರ್ಷ ಸುಭದ್ರ ಆಡಳಿತ ನೀಡಿ, ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾಮಮಾರ್ಗದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೆಚ್​ಡಿಕೆ ಹೇಳುತ್ತಿದ್ದಾರೆ. ಅವರ ಸಹೋದರ ರೇವಣ್ಣಗೆ ಕೇಳಿದರೆ ವಾಮಾಚಾರದ ಬಗ್ಗೆ ಹೇಳುತ್ತಾರೆ ಎಂದು ಎಂಬಿಪಿ ಲೇವಡಿ ಮಾಡಿದರು.

ಎಸ್​ಸಿ ಎಸ್​ಟಿಗೆ ಮೀಸಲಿರಿಸಿರುವ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂಬ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿ, ಎಸ್ಸಿ, ಎಸ್ಟಿ ಹಣ ಯಾವಾಗ ದುರುಪಯೋಗ ಆಗಿದೆ ಎಂಬುದನ್ನು ನಿರಾಣಿಯವರನ್ನೇ ಕೇಳಿ. ಮೊದಲು ಅವರ ಸರ್ಕಾರವಿದ್ದಾಗ ಮೆಟ್ರೋ ರೈಲು ಯೋಜನೆಗೆ ಎಸ್‌ಸಿ ಎಸ್​ಟಿ ಹಣ ಬಳಕೆ ಮಾಡಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಎಂ ಬಿ ಪಾಟೀಲ್​ ಕುಟುಕಿದರು.

ಇದನ್ನೂ ಓದಿ :ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ಮೋದಿಗೆ ಕೊಡುತ್ತೇನೆ, ಪೆನ್ ಡ್ರೈವ್ ಬಿಡುಗಡೆ ಮಾಡಿದ್ರೆ ತನಿಖೆ ಮಾಡುವ ತಾಕತ್ತು ಸರ್ಕಾರಕ್ಕೆ ಇದೆಯಾ? ಕುಮಾರಸ್ವಾಮಿ ಸವಾಲು

ABOUT THE AUTHOR

...view details