ವಿಜಯಪುರ:ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಬಗ್ಗೆ ಮೌನ ವಹಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಭಾರತ-ಚೀನಾ ನಡುವೆ ಸಂಘರ್ಷ..ಸಿದ್ದರಾಮಯ್ಯ ಹೇಳಿಕೆಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯುದ್ಧ ನಡೆಯುವಾಗ ವಿದೇಶ ಪ್ರವಾಸ ಮಾಡುತ್ತಿದ್ದ ಅಂದಿನ ಪ್ರಧಾನಿಯನ್ನು, ಸೈನಿಕರ ಹೆಗಲಿಗೆ ಹೆಗಲುಕೊಟ್ಟು ಅವರನ್ನ ಹುರಿದುಂಬಿಸುವ ಇಂದಿನ ಪ್ರಧಾನಿಗೆ ಹೋಲಿಕೆ ಮಾಡುವುದು ಎಷ್ಟು ಸರಿ ಎನ್ನುವ ಮೂಲಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಹಿಂದೆ ಸೈನಿಕ ಚಾರ್ಜ್ ದಳವಾಯಿ ಎನ್ನುವರು ಒಂದು ಪುಸ್ತಕ ಬರೆದಿದ್ದರು. ಅದರಲ್ಲಿ ತಾವು ಯುದ್ಧ ಭೂಮಿಯಲ್ಲಿ ಅನುಭವಿಸಿದ ನರಕಯಾತನೆ ಹಾಗೂ ಅಂದಿನ ಪ್ರಧಾನಿ ನಡೆದುಕೊಂಡ ರೀತಿ ಬರೆದಿದ್ದರು. ಮಾಜಿ ಪ್ರಧಾನಿ ಜವಾರಲಾಲ್ ನೆಹರು ಅವರ ಹೆಸರು ಪ್ರಸ್ತಾಪಿಸದೇ, ಕಾಂಗ್ರೆಸ್ ಆಡಳಿತಾವಧಿಯನ್ನ ಟೀಕಿಸಿದ್ದರು.
ಇಂದಿನ ಪ್ರಧಾನಿ ನರೇಂದ್ರ ಮೋದಿ, ಸೈನಿಕರ ಆತ್ಮಸೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸೈನಿಕರಿಗೆ ಧೈರ್ಯ ಹೇಳಿ, ಶತ್ರು ರಾಷ್ಟ್ರದ ಮೇಲೆ ಗುಂಡು ಹಾರಿಸಿ ನಾನಿದ್ದೇನೆ ಎಂದು ಧೈರ್ಯ ಹೇಳುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.