ಕರ್ನಾಟಕ

karnataka

ETV Bharat / state

‘ಸಿದ್ದರಾಮಯ್ಯರ ಚೀರಾಟ-ಹಾರಾಟಕ್ಕೆ ಜನ ಚುನಾವಣೆಯಲ್ಲಿ ಉತ್ತರ ನೀಡ್ತಾರೆ’ - Minister cc patil

ಅ.30ರಂದು ರಾಜ್ಯದ ಎರಡು ಉಪಚುನಾವಣೆ ನಡೆಯುತ್ತಿದೆ. ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಪ್ರಚಾರದ ವೇಳೆ ರಾಜಕೀಯ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಸಿ.ಸಿ. ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

minister-cc-patil-slams-former-cm-siddaramaiah
ಸಚಿವ ಸಿ.ಸಿ ಪಾಟೀಲ್ ಮಾಜಿ ಸಿಎಂ ಸಿದ್ದರಾಮಯ್ಯ

By

Published : Oct 28, 2021, 1:00 PM IST

ವಿಜಯಪುರ: ಸಿದ್ದರಾಮಯ್ಯರ ಚೀರಾಟ, ಹಾರಾಟಕ್ಕೆ ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕಂಬಳಿಯ ಮರ್ಯಾದೆ ಕಳೆಯುತ್ತಿದ್ದಾರೆ. ಅಲ್ಪಸಂಖ್ಯಾತರ ಕಾರ್ಯಕ್ರಮದಲ್ಲಿ ಟೋಪಿ ಹಾಕಿದ್ದಾರಲ್ಲ, ಅದಕ್ಕೇನು ಹೇಳುತ್ತಾರೆ?, ಈ ಹಾರಾಟ-ಚೀರಾಟಕ್ಕೆಲ್ಲ ಚುನಾವಣೆ ದಿನ ಜನ ಉತ್ತರಿಸುತ್ತಾರೆ ಎಂದಿದ್ದಾರೆ.

‘ಸಿದ್ದರಾಮಯ್ಯರ ಚೀರಾಟ-ಹಾರಾಟಕ್ಕೆ ಜನ ಚುನಾವಣೆಯಲ್ಲಿ ಉತ್ತರ ನೀಡ್ತಾರೆ’

ಇಷ್ಟೊಂದು ಮಾತಾಡೋ ಅವಶ್ಯಕತೆ ಇರಲಿಲ್ಲ. ಅವರ ಮಾತಿನ ಧಾಟಿ ಸುಧಾರಿಸಿಕೊಳ್ಳಲಿ. ಸಿದ್ದರಾಮಯ್ಯ ಕಂಬಳಿ ನೇಯ್ದಿದ್ದರಾ? ಜಾತಿಯನ್ನು ರಾಜಕೀಯಕ್ಕೆ ಉಪಯೋಗಿಸಬಾರದು, ಈ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ:ಸಚಿವರ ಜಿಲ್ಲಾ ಭೇಟಿ ವಿರಳ‌: 2 ಜಿಲ್ಲೆಯ ಉಸ್ತುವಾರಿ ಹೊತ್ತು ಎಸ್.ಟಿ.ಸೋಮಶೇಖರ್ ಸುಸ್ತು?

ABOUT THE AUTHOR

...view details