ಕರ್ನಾಟಕ

karnataka

ETV Bharat / state

ವಿಜಯಪುರ ನಗರ ಪ್ರದಕ್ಷಿಣೆ ನಡೆಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ - vijaypur byrathi basavaraj news

ವಿಜಯಪುರದ ಮೋಹನ ನಗರದ ಖಣಿ, ಆಕೃತಿ ನಗರದ ಉದ್ಯಾನವನ, ಆದಿಲ್ ಶಾಹಿ ಕಾಲದ ಬಾವಡಿ, ಜಿಲ್ಲಾ ಕ್ರೀಡಾಂಗಣ, ಕನಕದಾಸ ಬಡಾವಣೆಯ ಈಜುಕೊಳ ಸೇರಿದಂತೆ ಪ್ರಮುಖ ಸ್ಥಳಗಳನ್ನು ಸಚಿವ ಭೈರತಿ ಬಸವರಾಜ ವೀಕ್ಷಿಸಿದರು.

minister bhairati bsavaraj
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ

By

Published : Jun 23, 2020, 1:18 PM IST

Updated : Jun 23, 2020, 2:55 PM IST

ವಿಜಯಪುರ : ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಬೆಳ್ಳಂಬೆಳಗ್ಗೆ ನಗರದಲ್ಲಿ ಸಂಚಾರ ನಡೆಸಿ ಪ್ರಮುಖ ಸ್ಥಳಗಳನ್ನು ವೀಕ್ಷಿಸಿದರು.

ಮೋಹನ ನಗರದ ಖಣಿ, ಆಕೃತಿ ನಗರದ ಉದ್ಯಾನವನ, ಆದಿಲ್ ಶಾಹಿ ಕಾಲದ ಬಾವಡಿಗಳು, ನಂತರ ಜಿಲ್ಲಾ ಕ್ರೀಡಾಂಗಣ ವೀಕ್ಷಿಸಿದ ಅವರು ಕ್ರೀಡಾಪಟುಗಳು, ವಾಯುವಿಹಾರಿಗಳಿಗೆ ಅನುಕೂಲವಾಗುವ ಕೆಲ ಯೋಜನೆ ರೂಪಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಬಳಿಕ ಕನಕದಾಸ ಬಡಾವಣೆಯ ಈಜುಕೊಳ ವೀಕ್ಷಿಸಿ, ನಿರ್ಮಾಣ ಹಂತದ ಈಜುಕೊಳದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ವಿಜಯಪುರ ನಗರದ ಸುತ್ತಮುತ್ತ ಆದಿಲ್ ಶಾಹಿಗಳ 144 ಹೊಂಡಗಳಿದ್ದು ಸಾಕಷ್ಟು ನೀರಿನ ಲಭ್ಯತೆ ಇದೆ. ಈ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ನಗರದ ಉದ್ಯಾನವನಗಳ ನಿರ್ವಹಣೆ, ನಗರ ಸ್ವಚ್ಛತೆಗೆ ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ 144 ಬಾವಡಿಗಳ ಆಧುನೀಕರಣಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದರ ಜೊತೆಗೆ, ಈ ಕಾಮಗಾರಿ ಕುರಿತಂತೆ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರ ಸೇರಿ ನಾಲ್ಕು ಮಹಾನಗರ ಪಾಲಿಕೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಿಂದ ಕನಿಷ್ಠ 1 ಸಾವಿರ ಕೋಟಿ ರೂ. ಅನುದಾನ ದೊರೆಯಲಿದೆ ಎಂದು ತಿಳಿಸಿದರು.

Last Updated : Jun 23, 2020, 2:55 PM IST

ABOUT THE AUTHOR

...view details