ವಿಜಯಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಹಾಲು ಕೊಡುತ್ತಿರುವ ಬೇವಿನ ಮರವೊಂದು ಜಿಲ್ಲೆಯಲ್ಲಿ ಕಂಡುಬಂದಿದೆ.
ಪವಾಡವೋ, ವಿಜ್ಞಾನವೋ... ಬೇವಿನ ಮರದಲ್ಲಿ ಜಿನುಗಿತು ಸಿಹಿ ಹಾಲು
ವಿಜಯಪುರ ಜಿಲ್ಲೆಯ ಕನ್ನೂರ ಹಾಗೂ ಶಿರನಾಳ ಗ್ರಾಮಗಳ ಮಧ್ಯೆ ಇರುವ ರಾಮಜ್ಯೋತಿ ಸ್ಥಳದ ಹತ್ತಿರದ ಬೇವಿನ ಮರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಹಾಲಿನ ನೊರೆ ಬರುತ್ತಿದ್ದು, ಇದು ದೈವಶಕ್ತಿಯ ಪವಾಡ ಎಂದು ಮರಕ್ಕೆ ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣವನೇ ಬೇರೆ ಇದೆ.
ವಿಜಯಪುರ ಜಿಲ್ಲೆಯ ಕನ್ನೂರ ಹಾಗೂ ಶಿರನಾಳ ಗ್ರಾಮಗಳ ಮಧ್ಯೆ ಇರುವ ರಾಮಜ್ಯೋತಿ ಸ್ಥಳದ ಹತ್ತಿರದ ಬೇವಿನ ಮರದಲ್ಲಿ ಹಾಲಿನ ನೊರೆ ಬರುತ್ತಿದೆ. ಈ ಬೇವಿನ ಮರವು ಕಳೆದ ಮೂರ್ನಾಲ್ಕು ದಿನಗಳಿಂದ ಹಾಲನ್ನು ನೀಡುತ್ತಿದ್ದು, ಅದನ್ನು ನೋಡಿ ಸಾರ್ವಜನಿಕರು ಅಚ್ಚರಿ ಪಟ್ಟಿದ್ದಾರೆ. ಇನ್ನು ಕೆಲವರು ಇದು ದೈವಶಕ್ತಿಯ ಪವಾಡ ಎಂದು ಮರಕ್ಕೆ ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದಲ್ಲಿ ಈ ರೀತಿ ಸಿಹಿಯಾದ ಹಾಲಿನ ನೊರೆ ಬಂದ್ರೆ ಅದು ಆ ಭಾಗದಲ್ಲಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಆದರೆ ಇದಕ್ಕೆ ವೈಜ್ಞಾನಿಕ ಕಾರಣವನೇ ಬೇರೆ ಇದೆ. ಮಳೆಗಾಲದ ಸಮಯದಲ್ಲಿ ಕೆಲವೊಂದು ಬೇವಿನ ಮರಗಳು ತನಗೆ ಬೇಡವಾದ ಅಂಶವನ್ನು ಈ ರೀತಿ ಹೊರಹಾಕುತ್ತವೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ನಮ್ಮ ಜನರು ಮಾತ್ರ ಅಪರೂಪದ ಘಟನೆಗಳು ಕಂಡು ಬಂದಾಗ ಪೂಜೆ ಸಲ್ಲಿಸಿ ಭಕ್ತಿ ಮೆರೆಯುವುದು ಸಹಜವಾಗಿದೆ.