ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರಿಗೆ ಗ್ರಾಪಂ ಮಟ್ಟದಲ್ಲಿಯೇ ಉದ್ಯೋಗ ನೀಡಿ: ಶಾಸಕ ನಡಹಳ್ಳಿ - ಗ್ರಾ.ಪಂ ಮಟ್ಟದಲ್ಲಿಯೇ ಉದ್ಯೋಗ ನೀಡಿ

ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನಲ್ಲಿ ಭೂ ರಹಿತರಾಗಿರುವ 4,800 ಕಾರ್ಮಿಕರು ಪತ್ತೆಯಾಗಿದ್ದಾರೆ. ಅವರೆಲ್ಲರಿಗೂ ಉದ್ಯೋಗ ಕೊಡಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Migrant Workers Provide Employment at grama panchayat Level
ವಲಸೆ ಕಾರ್ಮಿಕರಿಗೆ ಗ್ರಾ.ಪಂ ಮಟ್ಟದಲ್ಲಿಯೇ ಉದ್ಯೋಗ ನೀಡಿ: ಶಾಸಕ ನಡಹಳ್ಳಿ

By

Published : Jun 10, 2020, 8:50 PM IST

Updated : Jun 10, 2020, 9:06 PM IST

ಮುದ್ದೇಬಿಹಾಳ:ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ವಲಸೆ ಹೋಗಿ ವಾಪಸಾಗಿರುವ ಕಾರ್ಮಿಕರಿಗೆ ಗ್ರಾಪಂ ಮಟ್ಟದಲ್ಲಿಯೇ ನಿರಂತರವಾಗಿ ಕನಿಷ್ಠ 100 ದಿನಗಳ ಉದ್ಯೋಗಾವಕಾಶವನ್ನು ಒದಗಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿ ತಾಳಿಕೋಟೆ, ಮುದ್ದೇಬಿಹಾಳ ತಾಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ವೈರಸ್ ಬಗ್ಗೆ ಕಾರ್ಮಿಕರಲ್ಲಿ ಇನ್ನೂ ಆತಂಕ ಮನೆ ಮಾಡಿದೆ. ಅದನ್ನು ದೂರ ಮಾಡುವ ಕಾರ್ಯ ಅಧಿಕಾರಿಗಳಿಂದಾಗಬೇಕು. ದುಡಿಯಲು ಹೋಗಿದ್ದ ಕಾರ್ಮಿಕರು ಬರಿಗೈಯಲ್ಲಿ ವಾಪಸಾಗಿದ್ದಾರೆ. ಅವರಿಗೆ ಕೆಲಸ ಕೊಟ್ಟು ಧೈರ್ಯ ತುಂಬುವ ಕಾರ್ಯ ಅಧಿಕಾರಿಗಳಿಂದಾಗಬೇಕು ಎಂದರು.

ವಲಸೆ ಕಾರ್ಮಿಕರಿಗೆ ಗ್ರಾಪಂ ಮಟ್ಟದಲ್ಲಿಯೇ ಉದ್ಯೋಗ ನೀಡಿ: ಶಾಸಕ ನಡಹಳ್ಳಿ

ತಾಪಂ ಇಒ ಶಶಿಕಾಂತ ಶಿವಪೂರೆ ಮಾತನಾಡಿ, ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನಲ್ಲಿ ಭೂ ರಹಿತರಾಗಿರುವ 4,800 ಕಾರ್ಮಿಕರು ಪತ್ತೆಯಾಗಿದ್ದಾರೆ. ಅವರೆಲ್ಲರಿಗೂ ಉದ್ಯೋಗ ಕೊಡಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಎಲ್ಲಾ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳು ಆರಂಭವಾಗಿವೆ ಎಂದು ಮಾಹಿತಿ ನೀಡಿದರು.

ಕಟ್ಟಡ ಕಾರ್ಮಿಕ ಇಲಾಖೆಯಡಿ 12,800 ನೋಂದಾಯಿತ ಕಾರ್ಮಿಕರು ಇದ್ದು, ಅದರಲ್ಲಿ ಈಗಾಗಲೇ ತಾಲೂಕಿನಲ್ಲಿ 5000 ಜನರಿಗೆ ಗುರುತಿನ ಕಾರ್ಡುದಾರರಿಗೆ ಹಣ ಜಮೆಯಾಗಿವೆ. ಕುಲ ಕಸಬುದಾರರು ನೇರವಾಗಿ ಕಾರ್ಮಿಕ ಇಲಾಖೆಗೆ ಅರ್ಜಿ ಕೊಟ್ಟರೆ ಸರ್ಕಾರದ ಸೌಲಭ್ಯ ನೀಡಲಾಗುವುದು ಎಂದು ಕಾರ್ಮಿಕ ಅಧಿಕಾರಿ ಐ.ಹೆಚ್.ಇನಾಮದಾರ ಸಭೆಗೆ ಮಾಹಿತಿ ನೀಡಿದರು.

Last Updated : Jun 10, 2020, 9:06 PM IST

ABOUT THE AUTHOR

...view details