ಕರ್ನಾಟಕ

karnataka

ETV Bharat / state

ಗುಳೆ ಹೋಗಿದ್ದ ಕಾರ್ಮಿಕರು ಹಕ್ಕು ಚಲಾಯಿಸಲು ಗೋವಾ, ಮಹಾರಾಷ್ಟ್ರದಿಂದ ತವರಿಗೆ ಬಂದ್ರು - Muddebihal Latest Update News

ಗ್ರಾಮ ಪಂಚಾಯಿತಿ​ ಚುನಾವಣೆ ಹಿನ್ನೆಲೆ ಗುಳೆ ಹೋದ ಕೂಲಿ ಕಾರ್ಮಿಕರು ತವರಿಗೆ ಆಗಮಿಸಿದ್ದಾರೆ. ಮುದ್ದೇಬಿಹಾಳದ ಕೋಳೂರು, ಅಡವಿ ಸೋಮನಾಳ, ಕುಂಟೋಜಿ, ಯರಝರಿ, ಬಿದರಕುಂದಿ, ಢವಳಗಿ, ನೇಬಗೇರಿ, ಇಂಗಳಗೇರಿ, ಬಿಜ್ಜೂರ, ನಾಗರಬೆಟ್ಟ ಸೇರಿದಂತೆ ಇತರ ಊರುಗಳಿಗೆ ಗುಳೆ ಹೋದ ಕಾರ್ಮಿಕರು ಇಂದು ತಮ್ಮ ಹಕ್ಕು ಚಲಾಯಿಸಲು ಊರಿಗೆ ಆಗಮಿಸಿದ್ದಾರೆ.

Muddebihal
ಮುದ್ದೇಬಿಹಾಳ: ಮತ ಚಲಾಯಿಸಲು ತವರಿಗೆ ಬಂದ ಗುಳೆ ಹೋದ ಕಾರ್ಮಿಕರು

By

Published : Dec 22, 2020, 10:43 AM IST

ಮುದ್ದೇಬಿಹಾಳ: ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು ತಮ್ಮ ಹಕ್ಕು ಚಲಾಯಿಸಲು ಮುದ್ದೇಬಿಹಾಳ ತಾಲೂಕಿಗೆ ಬಂದಿಳಿದಿದ್ದಾರೆ.

ಮುದ್ದೇಬಿಹಾಳ: ಮತ ಚಲಾಯಿಸಲು ತವರಿಗೆ ಬಂದ ಗುಳೆ ಕಾರ್ಮಿಕರು

ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಕಾರ್ಮಿಕರು ಬಸ್, ಜೀಪ್​, ಟೆಂಪೋಗಳ ಮೂಲಕ ಆಗಮಿಸಿದರು. ಕೋವಿಡ್-19 ಪರಿಸ್ಥಿತಿಯಲ್ಲಿ ಊರಿಗೆ ಕರೆದುಕೊಂಡು ಬರದೇ ಇರುವವರು ಇದೀಗ ತಾವೇ ಮುಂದೆ ಬಿದ್ದು ಊರಿಗೆ ಕರೆಯಿಸಿಕೊಂಡಿದ್ದಾರೆ. ಆದರೆ ನಮ್ಮ ಹಕ್ಕು ರದ್ದಾದೀತು ಎಂಬ ಭಯದಿಂದ ಮತದಾನ ಮಾಡಲು ಬಂದಿದ್ದೇವೆ ಎಂದು ಕಾರ್ಮಿಕರು ತಿಳಿಸಿದರು.

ಕೋಳೂರು, ಅಡವಿ ಸೋಮನಾಳ, ಕುಂಟೋಜಿ, ಯರಝರಿ, ಬಿದರಕುಂದಿ, ಢವಳಗಿ, ನೇಬಗೇರಿ, ಇಂಗಳಗೇರಿ, ಬಿಜ್ಜೂರ, ನಾಗರಬೆಟ್ಟ ಸೇರಿದಂತೆ ಇತರ ಊರುಗಳಿಗೆ ಗುಳೆ ಹೋದ ಕಾರ್ಮಿಕರು ಆಗಮಿಸಿದ್ದಾರೆ.

ದುಪ್ಪಟ್ಟು ಹಣ ಕೊಟ್ಟು ಕರೆಯಿಸಿದ ಅಭ್ಯರ್ಥಿಗಳು : ಈ ಬಾರಿ ದುಪ್ಪಟ್ಟು ಹಣ ಕೊಟ್ಟು ಮತದಾರರನ್ನು ಅಭ್ಯರ್ಥಿಗಳು ಕರೆ ತಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 1000 ರಿಂದ 1500 ಸಾವಿರ ರೂ.ವರೆಗೆ ಒಬ್ಬೊಬ್ಬ ಮತದಾರರಿಗೆ ಖರ್ಚು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ABOUT THE AUTHOR

...view details