ಕರ್ನಾಟಕ

karnataka

ETV Bharat / state

ವಿಜಯಪುರ: ಮಾನಸಿಕ ಅಸ್ವಸ್ಥನಿಂದ ತಾಯಿಯ ಕೊಲೆ - ತಾಯಿಯನ್ನು ಕೊಂದ ಮಾನಸಿಕ ಅಸ್ವಸ್ಥ

ಮಾನಸಿಕ ಅಸ್ವಸ್ಥನೋರ್ವ ತನ್ನ ತಾಯಿಯನ್ನು ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.

mentally ill person killed his mother
ಮಾನಸಿಕ ಅಸ್ವಸ್ಥನಿಂದ ತಾಯಿಯ ಕೊಲೆ

By

Published : Jun 25, 2020, 8:52 PM IST

ವಿಜಯಪುರ:ಮಾನಸಿಕ ಅಸ್ವಸ್ಥ ಮಗ, ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದಿದೆ.

ಬಾನು ಮೋಮಿನ್(49) ಮಗನಿಂದ ಕೊಲೆಯಾದ ತಾಯಿ. ರಫೀಕ್ ಮೋಮಿನ್ (30) ಎಂಬ ಮಾನಸಿಕ ಅಸ್ವಸ್ಥ ಹಾರೆಯಿಂದ ತಲೆಗೆ ಹೊಡೆದು ತಾಯಿಯನ್ನು ಕೊಂದಿದ್ದಲ್ಲದೆ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾನೆ.

ಬೆಳಗ್ಗೆ ಪತ್ನಿ ಮೇಲೆ ಹಲ್ಲೆ ಮಾಡಿದ ಕಾರಣ ಪತ್ನಿ ತವರಿಗೆ ತೆರಳಿದ್ದಳು. ಮಧ್ಯಾಹ್ನ ತಂದೆಯ ಮೇಲೆ ಹಲ್ಲೆ ಮಾಡಿದ್ದನು. ಸಂಜೆ ತನ್ನ ಅಜ್ಜಿ ಮೇಲೆ‌ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಹಲ್ಲೆ ತಡೆಯಲು ಬಂದ ತಾಯಿ ತಲೆಗೆ ಹಾರೆಯಿಂದ ಹೊಡೆದಿದ್ದಾನೆ. ಬಲವಾದ ಪೆಟ್ಟು ಬಿದ್ದ ಕಾರಣ ತಾಯಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ.

ಘಟನೆ ಬಳಿಕ ಮಾನಸಿಕ ಅಸ್ವಸ್ಥ ರಫೀಕ್ ನನ್ನು ಕಟ್ಟಿ ಹಾಕಿ ಕುಟುಂಬದವರು ಹಾಗೂ ಸ್ಥಳಿಯರು ಥಳಿಸಿದ್ದಾರೆ. ಸ್ಥಳಕ್ಕೆ ಇಂಡಿ‌ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೊಳಗಾದ ರಫೀಕ್​ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details