ಕರ್ನಾಟಕ

karnataka

ETV Bharat / state

ಖಾಸಗಿ, ಸರ್ಕಾರಿ ಶಾಲಾ ಶುಲ್ಕ ರದ್ದುಗೊಳಿಸುವಂತೆ ಬಿಎಸ್​ಪಿ ಮನವಿ - vijaypur bahujana samaja party

ದಿನಗೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕ ಬದುಕು ಅತಂತ್ರವಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ಬಂದಿದೆ. ಕೂಡಲೇ ಖಾಸಗಿ, ಸರ್ಕಾರಿ ಶಾಲಾ ಶುಲ್ಕವನ್ನು ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಹುಜನ ಸಮಾಜ ಪಕ್ಷ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸದರು.

memorandum-submit-by-bahujana-samaja-party
ಖಾಸಗಿ, ಸರ್ಕಾರಿ ಶಾಲಾ ಶುಲ್ಕ ರದ್ದುಗೊಳಿಸುವಂತೆ ಬಿಎಸ್​ಪಿ ಮನವಿ

By

Published : Sep 16, 2020, 4:45 PM IST

ವಿಜಯಪುರ: ಸರ್ಕಾರಿ ಹಾಗೂ ಖಾಸಗಿ ಶಾಲಾ ಶುಲ್ಕವನ್ನು ರದ್ದು ಮಾಡುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಖಾಸಗಿ, ಸರ್ಕಾರಿ ಶಾಲಾ ಶುಲ್ಕ ರದ್ದುಗೊಳಿಸುವಂತೆ ಬಿಎಸ್​ಪಿ ಮನವಿ

ರಾಜ್ಯದಲ್ಲಿ‌ ಕೊರೊನಾ‌ ಆರಂಭದ ದಿನ‌ದಿಂದಲೂ ಕಾರ್ಮಿಕರು, ಕೂಲಿಗಳು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ‌. ಲಾಕ್‌ಡೌನ್ ಪರಿಣಾಮದಿಂದ ಅಸಂಘಟಿತ ಕಾರ್ಮಿಕರ ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ. ಹೀಗಾಗಿ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣ ಶುಲ್ಕ ಮನ್ನಾಗೊಳಿಸುವಂತೆ ಮನವಿ ಮೂಲಕ ಒತ್ತಾಯಿಸಿದರು.

ಅಂದಾಜು 18 ಕೋಟಿಗೂ ಅಧಿಕ ಜನರು ದುಡಿಮೆ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಶುಲ್ಕು ಭರಿಸುವ ಕಾರ್ಯಕ್ಕೆ ಮುಂದಾಗಬೇಕು. ಕೆಲವು ಷೋಷಕರು ತಮ್ಮ ಮಕ್ಕಳ ಶಾಲಾ-ಕಾಲೇಜು ಶುಲ್ಕ ಭರಿಸಲಾಗದೇ ಅಸಹಾಯಕರಾಗಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಮನವಿ ಮಾಡಿದರು.

ಇನ್ನೂ ಆನ್‌ಲೈನ್ ತರಗತಿಗಳಿಗೆ ಬಡ ವಿದ್ಯಾರ್ಥಿಗಳು ಹಾಜರಾಗಲು ಆಗುತ್ತಿಲ್ಲ. ಸರ್ಕಾರವೇ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ABOUT THE AUTHOR

...view details