ಕರ್ನಾಟಕ

karnataka

ETV Bharat / state

ನಾಳೆ ವೀರಶೈವ ಸಂಪ್ರದಾಯದಂತೆ ಎಂ.ಸಿ.ಮನಗೂಳಿ ಅಂತ್ಯ ಸಂಸ್ಕಾರ - ಶಾಸಕ ಎಂ.ಸಿ ಮನಗೂಳಿ ನಿಧನ

ಸಿಂದಗಿಯ ತಾಲೂಕು ಶಿಕ್ಷಣ ಮಂಡಳಿ ಮೈದಾನದಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಸಂಪ್ರದಾಯದಂತೆ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಅವರ ನಿವಾಸದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು.

MC Managoli funeral tomorrow as the Veerashaiva tradition
ಶಾಸಕ ಎಂ.ಸಿ ಮನಗೂಳಿ

By

Published : Jan 28, 2021, 7:08 PM IST

ವಿಜಯಪುರ: ಜಿಲ್ಲೆಯ ಹಿರಿಯ ರಾಜಕಾರಣಿ, ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನಕ್ಕೆ ರಾಜ್ಯದ ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಿಂದ ಪಾರ್ಥಿವ ಶರೀರ ಆಗಮಿಸಿದ್ದು, ನಾಳೆ ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ಸಿಂದಗಿಯ ತಾಲೂಕು ಶಿಕ್ಷಣ ಮಂಡಳಿ ಮೈದಾನದಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಸಂಪ್ರದಾಯದಂತೆ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಅವರ ನಿವಾಸದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು.

ನಾಳೆ ನಡೆಯುವ ಅಂತ್ಯಕ್ರಿಯೆಯಲ್ಲಿ ವೀರಶೈವ ಸಮಾಜದ ಪದ್ಧತಿಯಂತೆ 5 ಸಾವಿರ ವಿಭೂತಿ ಬಳಸಲಾಗುತ್ತದೆ ಎಂದು ಅಭಿನವ ಸಂಗನಬಸವ ಶಿವಾರ್ಚಾಯ ಮನಗೂಳಿ ಹೇಳಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಭಾಗವಹಿಸುವ ಸಾಧ್ಯತೆ ಇದೆ. ಆದರೆ ಇಲ್ಲಿಯವರೆಗೆ ಅವರ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗಿಲ್ಲ. ಉಳಿದಂತೆ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ವಿವಿಧ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಎಂ.ಸಿ.ಮನಗೂಳಿ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ

ABOUT THE AUTHOR

...view details