ವಿಜಯಪುರ:ತಮ್ಮ ವಿಧಾನಸಭಾ ಕ್ಷೇತ್ರದ ರೇಷನ್ ಕಾರ್ಡ್ ವಂಚಿತ ಕಡು-ಬಡವ ಕುಟುಂಬಗಳಿಗೆ ಉಚಿತ ಪಡಿತರವನ್ನು ವೈಯಕ್ತಿಕವಾಗಿ ನೀಡುವ ಮೂಲಕ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಕೊರೊನಾ ಸಂಕಷ್ಟದಲ್ಲಿ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ರೇಷನ್ ಕಾರ್ಡ್ ವಂಚಿತ ಕುಟುಂಬಗಳಿಗೆ ಮಾಜಿ ಸಚಿವರಿಂದ ಉಚಿತ ಪಡಿತರ
ಕ್ಷೇತ್ರದ ಒಟ್ಟು 3 ಸಾವಿರ ಕುಟುಂಬಗಳ ಪಟ್ಟಿಯನ್ನು ತಾಲೂಕು ಆಡಳಿತದ ಮೂಲಕ ಪಡೆಯಲಾಗಿದ್ದು, ಅವರೆಲ್ಲರಿಗೂ ಈಗ ಎಂ.ಬಿ.ಪಾಟೀಲ್ ವೈಯಕ್ತಿಕವಾಗಿ ಪಡಿತರವನ್ನು ನೀಡಿದ್ದಾರೆ.
ಈ ಹಿಂದೆ ತಮ್ಮ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಸಭೆ ನಡೆಸಿದ ಶಾಸಕರು. ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸರ್ಕಾರಿ ಪಡಿತರ ವ್ಯವಸ್ಥೆಯಿಂದ ವಂಚಿತರಾಗಿದ್ದ ಕಡು-ಬಡವ ಕುಟುಂಬಗಳ ಪಟ್ಟಿ ಪಡೆದು ಅದನ್ನು ಕ್ರೋಢಿಕರಿಸಿ, ಆ ಎಲ್ಲ ಕುಟುಂಬಗಳಿಗೆ ತಲಾ ಉತ್ತಮ ಗುಣಮಟ್ಟದ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಗೋಧಿ ಹಿಟ್ಟು ಪ್ಯಾಕೆಟ್ ನೀಡುತ್ತಿದ್ದು, ಇಂದು ಮೂರು ಲಾರಿಗಳಲ್ಲಿ ಬಬಲೇಶ್ವರ, ತಿಕೋಟ ಮತ್ತು ಮಮದಾಪುರ ಹೋಬಳಿಗಳಿಗೆ ತಹಶೀಲ್ದಾರ್ ಮೂಲಕ ಕಳುಹಿಸಿ ಕೊಡಲಾಯಿತು.
ಬಬಲೇಶ್ವರ ಹಾಗೂ ತಿಕೋಟಾ ತಹಶೀಲ್ದಾರ್ರವರು ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ವಂಚಿತ ಕುಟುಂಬಗಳ ಮನೆ-ಮನೆಗೆ ತಲುಪಿಸುತ್ತಿದ್ದಾರೆ. ಕ್ಷೇತ್ರದ ಒಟ್ಟು 3 ಸಾವಿರ ಕುಟುಂಬಗಳ ಪಟ್ಟಿಯನ್ನು ತಾಲೂಕು ಆಡಳಿತದ ಮೂಲಕ ಪಡೆಯಲಾಗಿದ್ದು, ಅವರೆಲ್ಲರಿಗೂ ಈಗ ಎಂ.ಬಿ.ಪಾಟೀಲ್ ವೈಯಕ್ತಿಕವಾಗಿ ಪಡಿತರವನ್ನು ನೀಡಿದ್ದಾರೆ.
TAGGED:
ಶಾಸಕ ಎಂ.ಬಿ.ಪಾಟೀಲ