ಕರ್ನಾಟಕ

karnataka

By

Published : Feb 12, 2021, 10:39 PM IST

ETV Bharat / state

ಮುದ್ದೇಬಿಹಾಳ: ಅಂಬ್ಯುಲೆನ್ಸ್​ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಆರೋಗ್ಯ ಸಿಬ್ಬಂದಿ

ತೀವ್ರ ರಕ್ತಸ್ರಾವದಿಂದ ಆಂಬ್ಯುಲೆನ್ಸ್​ನಲ್ಲಿ ನರಳುತ್ತಿದ್ದ ಗರ್ಭಿಣಿಗೆ ಆಂಬ್ಯುಲೆನ್ಸ್​ನಲ್ಲಿದ್ದ ತುರ್ತು ಆರೋಗ್ಯ ತಜ್ಞ ಶ್ರೀಶೈಲ ಹೂಗಾರ್​ ಹೆರಿಗೆ ಮಾಡಿಸಿದ್ದಾರೆ.

maternity-for-pregnant-in-ambulance
ಅಂಬ್ಯುಲೆನ್ಸ್​ನಲ್ಲಿಯೇ ಮಹಿಳೆಗೆ ಹರಿಗೆ ಮಾಡಿಸಿದ ಆರೋಗ್ಯ ಸಿಬ್ಬಂದಿ

ಮುದ್ದೇಬಿಹಾಳ: ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ ಆಗಿರುವ ಘಟನೆ ತಾಲೂಕಿನ ಹಗರಗುಂಡ ಗ್ರಾಮದಲ್ಲಿ ನಡೆದಿದೆ.

26 ವರ್ಷದ ಶಶಿಕಲಾ ಬಾಬು ರಾಠೋಡ ಎಂಬಾಕೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ 108ಕ್ಕೆ ಕರೆ ಮಾಡಿ ಕುಟುಂಬದವರು ಆಂಬ್ಯುಲೆನ್ಸ್​ನಲ್ಲಿ ಹೆರಿಗೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮತ್ತಷ್ಟು ನೋವು ಹೆಚ್ಚಾದಾಗ ಆಂಬ್ಯುಲೆನ್ಸ್​ನಲ್ಲಿದ್ದ ತುರ್ತು ಆರೋಗ್ಯ ತಜ್ಞ ಶ್ರೀಶೈಲ ಹೂಗಾರ್​ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶ್ರೀಶೈಲ್, ಗರ್ಭಿಣಿ ಶಶಿಕಲಾಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಹೊಟ್ಟೆಯಲ್ಲಿ ಎರಡು ಮಕ್ಕಳಿದ್ದ ಕಾರಣ ಒಂದು ಮಗು ಹೊಟ್ಟೆಯಲ್ಲಿಯೇ ಅಸುನೀಗಿತ್ತು. ಸದ್ಯಕ್ಕೆ ಗಂಡು ಮಗುವಿಗೆ ಜನ್ಮ ನೀಡಿರುವ ಶಶಿಕಲಾ ಆರೋಗ್ಯವಾಗಿದ್ದು, ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಮುತ್ತಣ್ಣ ಮಡಿವಾಳರ ಸಹ ಇದ್ದರು. ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಕ್ಕಾಗಿ ಶ್ರೀಶೈಲ ಹೂಗಾರ್​ಗೆ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

ABOUT THE AUTHOR

...view details