ಮುದ್ದೇಬಿಹಾಳ(ವಿಜಯಪುರ):ಕೋವಿಡ್ ಆತಂಕವನ್ನು ನಿರ್ಮೂಲನೆಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮ ಮಹತ್ವಪೂರ್ಣವಾಗಿದೆ. ಅತ್ಯಂತ ಕಡಿಮೆ ಸಂಬಳದಲ್ಲಿ ವೈರಾಣು ನಿರ್ಮೂಲನೆಗೆ ತಮ್ಮ ಜೀವ ಒತ್ತೆಯಿಟ್ಟು ಸರ್ಕಾರ ನೀಡುತ್ತಿರುವ ಸೂಚನೆಗಳನ್ನು ಅನುಷ್ಠಾನ ಮಾಡುತ್ತಿರುವ ಇವರ ಕೆಲಸ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕೊಂಡಾಡಿದರು.
ಜೆ.ಸಿ.ಸಂಸ್ಥೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಕೊಡೆ, ಮುಖಗವಸು ವಿತರಣೆ - Asha workers
ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜೆ.ಸಿ.ಸಂಸ್ಥೆಯಿಂದ ತಾಲ್ಲೂಕಿನ 270 ಆಶಾ ಕಾರ್ಯಕರ್ತೆಯರಿಗೆ ಕೊಡೆ ಹಾಗೂ ಮಾಸ್ಕ್ಗಳನ್ನು ವಿತರಿಸಲಾಯಿತು.
ಕೊರೊನಾ ನಿವಾರಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರಿಗೆ ಕೊಡೆ, ಮಾಸ್ಕ್ ವಿತರಣೆ
ಜೆ. ಸಿ. ಸಂಸ್ಥೆಯ ವತಿಯಿಂದ ಭಾನುವಾರ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲ್ಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕೊಡೆ ಹಾಗೂ ಮಾಸ್ಕ್ಗಳನ್ನು ವಿತರಿಸಿ ಅವರು ಮಾತನಾಡಿದರು.
ತಹಶೀಲ್ದಾರ್ ಜಿ. ಎಸ್.ಮಳಗಿ, ಸಂಸ್ಥೆಯ ಅಧ್ಯಕ್ಷ ರವಿ ಗೂಳಿ ಉಪಸ್ಥಿತರಿದ್ದರು.