ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಐದು ಭಾಗವಾಗಿ ಮಾರುಕಟ್ಟೆ ವಿಭಜನೆ - market divided by Five parts to maintain social distance

ಕೊರೊನಾ ತಡೆಗಟ್ಟಲು ಉದ್ದೇಶದಿಂದ ವಿಜಯಪುರ ಸ್ಯಾಟಲೈಟ್ ಬಸ್ ನಿಲ್ದಾಣದ ತರಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ‌ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದು ದೃಶ್ಯ ಕಂಡುಬಂದಿತು.

ಸಾಮಾಜಿಕ‌ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ ಜನ
ಸಾಮಾಜಿಕ‌ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ ಜನ

By

Published : Apr 17, 2020, 11:23 AM IST

ವಿಜಯಪುರ: ಕೊರೊನಾ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ತರಕಾರಿ ಹಾಗೂ ಹಣ್ಣಿನ ವಹಿವಾಟಿನ‌ಲ್ಲಿ ತೊಡಗಿದ್ದಾರೆ.

ಸಾಮಾಜಿಕ‌ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ ಜನ

ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಅತಂಕದ ನಡುವೆಯೂ ಸಾಮಾಜಿಕ ಅಂತರವಿಲ್ಲದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವುದನ್ನು ಈ ಟಿವಿ ಭಾರತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಎಪಿಎಂಸಿ ತರಕಾರಿ ಮಾರುಕಟ್ಟೆಯನ್ನು ಐದು ಭಾಗದಲ್ಲಿ ವಿಂಗಡಿಸಿ ರೈತರನ್ನು ಮಾರುಕಟ್ಟೆಗೆ ಕರೆತರುವ ಹಾಗೂ ಅನುಕೂಲಕರ ರೀತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ಯೋಜನೆ ರೂಪಿಸಿ ನಗರದ ಅಥಣಿ ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ನವಭಾಗ ರಸ್ತೆ, ಎಂ.ಬಿ. ಪಾಟೀಲ್​ ನಗರ ಸೇರಿದಂತೆ ಒಟ್ಟು ಐದು ಭಾಗಗಳಲ್ಲಿ ತರಕಾರಿ ಮಾರುಕಟ್ಟೆಯನ್ನ ಆರಂಭಿಸಲಾಗಿದೆ. ರೈತರು ಕೂಡ ಮಾರುಕಟ್ಟೆಗಳಿಗೆ ಆಗಮಿಸಿ ಮಾರಾಟ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ABOUT THE AUTHOR

...view details