ದೇವನಹಳ್ಳಿ: ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಗಳನ್ನು ಪೊಲೀಸರು ವಿಚಾರಿಸಿದಾಗ ಗಾಂಜಾ ಮಾರಾಟಕ್ಕೆ ಗ್ರಾಹಕರಿಗೆ ಕಾಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. 45 ಸಾವಿರ ಮೌಲ್ಯದ 1 ಕೆಜಿ, 400 ಗ್ರಾಂ ಗಾಂಜಾ ಪತ್ತೆಯಾಗಿದೆ.
ಗಾಂಜಾ ಮಾರಾಟಕ್ಕೆ ಕಾಯುತ್ತಿದ್ದವರು ಪೊಲೀಸರ ಬಲೆಗೆ! - marijuana latest news
ವಿಜಯಪುರದಲ್ಲಿ ಗಾಂಜಾ ಮಾರಾಟಕ್ಕೆ ಕಾಯುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 1 ಕೆಜಿ 400 ಗ್ರಾಂ. ಗಾಂಜಾ ಹಾಗೂ ನಗದು 14,700 ವಶಕ್ಕೆ ಪಡೆಯಲಾಗಿದೆ.
ಗಾಂಜಾ ಮಾರಾಟಕ್ಕೆ ಕಾಯುತ್ತಿದ್ದವರು ಪೊಲೀಸರ ಬಲೆಗೆ
ಪಟ್ಟಣದ ಜಂಗ್ಲೀ ಪೀರ್ ದರ್ಗಾದ ಬಳಿ ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ಪಿಎಸ್ಐ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ ಮುನಾವರ್ ( 37) ಮತ್ತು ಶ್ರೀನಿವಾಸ್ (50) ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 14,700 ನಗದು ಹಣ ವಶಕ್ಕೆ ಪಡೆಯಲಾಗಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.