ವಿಜಯಪುರ:ಪಂಚಮಸಾಲಿ ಸಮಾಜದ ಮೂಲ ಪೀಠ ಹರಿಹರ ಪೀಠ ಎಂದು ಮನಗೂಳಿಯ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ಫೆ.13ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರದಲ್ಲಿ ಸ್ಥಾಪನೆಯಾಗುತ್ತಿರುವ ಪಂಚಮಸಾಲಿ ಸಮಾಜದ ಮೂರನೇ ಪೀಠ ವಿಚಾರವಾಗಿ ವಿಜಯಪುರದಲ್ಲಿಂದು ಶ್ರೀಗಳು ಮಾತನಾಡಿದರು. ರಾಜ್ಯದಲ್ಲಿ ಒಂದೇ ಸಮಾಜದ ಮೂರು ಪೀಠ ಆಗುತ್ತಿದೆ. ಆದರೆ, ಮೂಲ ಪೀಠ ಹರಿಹರ ಪೀಠ ಅಂತ ಹೇಳೋಕೆ ಇಚ್ಛೆ ಪಡುತ್ತೇನೆ ಎಂದರು.
ಕೂಡಲ ಸಂಗಮ ಪೀಠ ಸಮಾಜದ ಮೂಲ ಪೀಠ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, 10 ಲಕ್ಷ ಜನರನ್ನು ಕೂಡಿಸಿ ಹರಿಹರ ಪೀಠ ಮಾಡಲಾಗಿದೆ. ಹಾಗಾಗಿ ಮೂಲ ಪೀಠ ಹರಿಹರ ಪೀಠ ಎಂದು ಪುನರುಚ್ಚರಿಸಿದರು.
ಮನಗೂಳಿ ಮಹಾಂತ ಸ್ವಾಮೀಜಿಗಳ ಬಹಳ ದಿನದ ಕನಸು ಈ ಮೂರನೇ ಪೀಠ ಸ್ಥಾಪಿಸುವುದಾಗಿತ್ತು. ಇವರು 14 ಭಾಷೆ ಮಾತಾಡುತ್ತಿದ್ರು, ಎಷ್ಟೋ ಪೀಠಾಧ್ಯಕ್ಷ ಸ್ಥಾನ ಬಂದ್ರೂ ಅವರು ನಿರಾಕರಿಸಿದ್ದರು ಎಂದರು. ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೂ ಆಹ್ವಾನ ಕೊಡುತ್ತೇವೆ. ಬರೋದು ಬಿಡೋದು ಅವರಿಗೆ ಬಿಟ್ಟಿದ್ದು. ನಿನ್ನೆ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಇಂದು ನಾಳೆ ಸಂಪರ್ಕಿಸುತ್ತೇವೆ ಎಂದರು.