ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಪತಿ - vijayapura murder case latest news

ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ವಾದಾ ವಿವಾದ ತಾರಕಕ್ಕೇರಿ ಪತಿ ಬಸವರಾಜ ಗೊಂಡೇದ ತನ್ನ ಹೊಲದಲ್ಲಿ ಕಬ್ಬು ಕತ್ತರಿಸುವ ಮಚ್ಚಿನಿಂದ ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.

Man killed his wife in Vijayapura
ತನ್ನ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪತಿರಾಯ

By

Published : Feb 28, 2020, 9:53 PM IST

ವಿಜಯಪುರ: ಪತಿಯೊಬ್ಬ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಗೋಡಿಹಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ.

ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪತಿರಾಯ

ಮಹಾನಂದಾ ಗೊಂಡೇದ(43) ಮೃತ ಮಹಿಳೆ. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಗಂಡ-ಹೆಂಡತಿ ಜೊತೆಯಾಗಿ ಎಮ್ಮೆಗಳನ್ನು ಮೇಯಿಸಲು ಹೋದಾಗ ಕ್ಷುಲ್ಲಕ ಕಾರಣದಿಂದ ಇಬ್ಬರ ನಡುವೆ ನಡೆದ ವಾದಾ ವಿವಾದ ತಾರಕಕ್ಕೇರಿದೆ. ಪರಿಣಾಮ ಪತಿ ಬಸವರಾಜ ಗೊಂಡೇದ ತನ್ನ ಹೊಲದಲ್ಲಿ ಕಬ್ಬು ಕತ್ತರಿಸುವ ಮಚ್ಚಿನಿಂದ ಪತ್ನಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆ ಮಾಡಿದ ಆರೋಪಿ ಬಸವರಾಜ ಗೊಂಡೇದನನ್ನು ಚಡಚಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಇಂಡಿ ಡಿವೈಎಸ್​ಪಿ ಎನ್.ಬಿ.ಸಂಕದ ಹಾಗೂ ಚಡಚಣ ಪಿಎಸ್ಐ ಮಹಾದೇವ ಎಲಿಗಾರ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಸದ್ಯ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details