ಕರ್ನಾಟಕ

karnataka

ETV Bharat / state

ವಿಜಯನಗರ: ಬ್ಲ್ಯಾಕ್ ಫಂಗಸ್​ಗೆ ವ್ಯಕ್ತಿ ಬಲಿ - man died due to the black fungus in vijayanagara

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ಲ್ಯಾಕ್ ಫಂಗಸ್ ರೋಗಿ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.

black-fungus
ಬ್ಲ್ಯಾಕ್ ಫಂಗಸ್

By

Published : Jun 2, 2021, 3:25 PM IST

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿಯಲ್ಲಿ ಕರಿಮಾರಿ ಬ್ಲ್ಯಾಕ್ ಫಂಗಸ್​ಗೆ ನಿನ್ನೆ ಸಂಜೆ ಮೊದಲ ಬಲಿಯಾಗಿದೆ.‌

ಹಗರಿಬೊಮ್ಮನಹಳ್ಳಿ ಪಟ್ಟಣದ 46 ವರ್ಷದ ವ್ಯಕ್ತಿ ಕರಿಮಾರಿಗೆ ಬಲಿಯಾದವರು. ಮೊದಲು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಕೊರೊನಾಗೆ ಹೊಸಪೇಟೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಕೊರೊನಾದಿಂದ ಗುಣಮುಖರಾದ ನಂತರ ಕಣ್ಣಿನ ಬಾವು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುವಾಗ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಬಳ್ಳಾರಿಯ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಓದಿ:ಪೋಲಿಯೋ ಮಾದರಿಯಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿ: ಖಂಡ್ರೆ ಸಲಹೆ

ABOUT THE AUTHOR

...view details