ವಿಜಯಪುರ: ರಸ್ತೆ ದಾಟಲು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.
ನಗರ ನಿವಾಸಿ ಸುರೇಶ ದೊಡ್ಡಿ (35) ಮೃತರು. ಮೃತ ಸುರೇಶ ನಗರಾದ್ಯಂತ ಮಸಾಲ ಐಟಮ್ಸ್ ಮಾರಿ ಜೀವನ ನಡೆಸುತ್ತಿದ್ದರು. ನಿನ್ನೆ ರಾತ್ರಿ ರಸ್ತೆ ದಾಟುವ ವೇಳೆಯಲ್ಲಿ ವಾಹನ ಡಿಕ್ಕಿಯಾಗಿ ಸುರೇಶ ಸ್ಥಳದಲ್ಲೇ ಸಾವನ್ನಪ್ಪಿದರೆ, ಡಿಕ್ಕಿ ಹೊಡೆದ ಸವಾರ ಪರಾರಿಯಾಗಿದ್ದಾನೆ.