ಕರ್ನಾಟಕ

karnataka

ETV Bharat / state

ನವರಾತ್ರಿಯ ದೀಪ ತರುತ್ತಿದ್ದ ಯುವಕನಿಗೆ ವಾಹನ ಡಿಕ್ಕಿ.. ಸ್ಥಳದಲ್ಲಿಯೇ ಸಾವು - ಝಳಕಿ ಪೊಲೀಸ್​ ಠಾಣಾ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಸರ್ವಿಸ್‌ ರಸ್ತೆಯಲ್ಲಿ ಯವಕನೊಬ್ಬ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ವಿಜಯಪುರದಲ್ಲಿ ಅಪಘಾತ
ವಿಜಯಪುರದಲ್ಲಿ ಅಪಘಾತ

By

Published : Sep 26, 2022, 5:17 PM IST

ವಿಜಯಪುರ:ಮಹಾರಾಷ್ಟ್ರದ ತುಳಜಾಪುರದಿಂದ ದೇವಿ ದೀಪ ತರುತ್ತಿದ್ದ ಯುವಕನಿಗೆ ವಾಹನ ಡಿಕ್ಕಿಯಾಗಿರುವ ಪರಿಣಾಮ ಯುವಕ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಸರ್ವಿಸ್‌ ರಸ್ತೆಯಲ್ಲಿ ನಡೆದಿದೆ.‌

ಮಹಾರಾಷ್ಟ್ರ ಜತ್ ತಾಲೂಕಿನ ಉಮದಿ ಮೂಲದ ಕರನ್ ಕೆಂಗಾರ್ (25) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ನವರಾತ್ರಿ ಪ್ರಯುಕ್ತ ತುಳಜಾಪುರದ ಅಂಬಾಭವಾನಿ ದೇಗುಲದಿಂದ ಯುವಕರ ತಂಡ ದೀಪದ ಪಂಜು ತರುತ್ತಿದ್ದರು.

ನವರಾತ್ರಿಯ ದೀಪ ತರುತ್ತಿದ್ದ ಯುವಕನಿಗೆ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ಈ ವೇಳೆ, ದೀಪವನ್ನ ಮತ್ತೊಬ್ಬ ಯುವಕನಿಗೆ ಹಸ್ತಾಂತರಿಸಿ ವಾಹನ ಹತ್ತುವ ವೇಳೆ ಕರನ್ ಕೆಳಗೆ ಬಿದ್ದಿದ್ದಾನೆ. ಈ ವೇಳೆಯಲ್ಲಿ ಹಿಂಬದಿಯಿಂದ ಬಂದ ವಾಹನ ಯುವಕನಿಗೆ ಡಿಕ್ಕಿಯಾಗಿದೆ. ಝಳಕಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಓದಿ:ನಾಲ್ಕು ವರ್ಷದಿಂದ ಪೊಲೀಸರಿಗೆ ಸಿಗದ ಆರೋಪಿ ಪತ್ನಿ ಜೊತೆ ಜಗಳವಾಡಿ ಸಿಕ್ಕಿಬಿದ್ದ

ABOUT THE AUTHOR

...view details