ಕರ್ನಾಟಕ

karnataka

ETV Bharat / state

ವ್ಯಕ್ತಿಯ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ - Vijayapura latest cirme news

ಹೊಸ ವರ್ಷದ ಮೊದಲ ದಿನವೇ ಜಿಲ್ಲೆಯಲ್ಲಿ ಮತ್ತೊಂದು ನೆತ್ತರು ಹರಿದಿದೆ. ಚಾಕುವಿನಿಂದ ವ್ಯಕ್ತಿಯ ಕತ್ತು ಕೊಯ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಿವ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Man brutally murdered during new year party in Vijayapura
ಕೊಲೆಯಾದ ವ್ಯಕ್ತಿ

By

Published : Jan 1, 2021, 7:06 PM IST

Updated : Jan 1, 2021, 7:23 PM IST

ವಿಜಯಪುರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ರತ್ನಾಪುರ ಬಳಿಯ ಎ1 ಡಾಬಾದಲ್ಲಿ ನಡೆದಿದೆ.

ಮಹಾದೇವ ಕವಲಗಿ (57) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.

ಮಹಾದೇವನ ಕತ್ತು ಕೊಯ್ದು ಹಾಗೂ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ. ಹೊಸ ವರ್ಷದ ಪಾರ್ಟಿ ಮಾಡುವ ವೇಳೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರಕರಣ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಮಹದೇವ ಜೊತೆ ಊಟಕ್ಕೆ ಕುಳಿತಿದ್ದ ಸಂತೋಷ ಎಡವೆ, ದಶರಥ ಹಾಗೂ ಪಾಂಡುರಂಗ ಎಂಬ ಯುವಕರು ಕೊಲೆಗೀಡಾದ ಮಹದೇವ ಹಾಗೂ ಯುವಕ ಸಂತೋಷ ತಂದೆಯ ಮಧ್ಯೆ ಈ ಹಿಂದೆ ಜಗಳ ಆಗಿತ್ತು ಎಂದು ಹೇಳಲಾಗುತ್ತಿದೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯ ಕೊಲೆ

ಡಾಬಾದಲ್ಲಿ ಬಿಲ್ ನೀಡುವ ವಿಚಾರವಾಗಿ ಜಗಳ ಆಗಿದ್ದು, ಇದೇ ವಿಚಾರವಾಗಿ ಯುವಕರು ಮಹಾದೇವನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ಬಳಿಕ ಸಂತೋಷ್​ ಮತ್ತು ಸ್ನೇಹಿತರು ಪರಾರಿಯಾಗಿದ್ದಾರೆ.

ಓದಿ :ಹೊಸ ವರ್ಷಾಚರಣೆ ವೇಳೆ ಗುಮ್ಮಟನಗರಿಯಲ್ಲಿ ಚೆಲ್ಲಿದ ರಕ್ತ...!

ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕೊಲೆಗೀಡಾದ ಮಹಾದೇವನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Last Updated : Jan 1, 2021, 7:23 PM IST

ABOUT THE AUTHOR

...view details