ವಿಜಯಪುರ:ಸಮುದಾಯ ಭವನದ ಕೀ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯ ಕಿವಿಯನ್ನೇ ಕಚ್ಚಿದ ಘಟನೆ ವಿಜಯಪುರ ತಾಲೂಕಿನ ಮಹಲ-ಐನಾಪುರದಲ್ಲಿ ನಡೆದಿದೆ.
ಸುರೇಶ ಚವ್ಹಾಣ ಎಂಬ ಖಾಸಗಿ ಶಾಲೆಯ ಶಿಕ್ಷಕನಿಂದ ಈ ಕೃತ್ಯ ನಡೆದಿದೆ. ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಬಾಬು ಕಡಣಿ ಅವರಿಗೆ ಕಚ್ಚಲಾಗಿದೆ. ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಆದೇಶದ ಮೇರೆಗೆ ಪೇದೆ ಕೀ ಕೇಳಿದ್ದಕ್ಕೆ ಈ ವೇಳೆ ಏಕಾಏಕಿ ಹಲ್ಲೆಮಾಡಿ, ಕಿವಿ ಕಚ್ಚಿದ್ದಾನೆ. ತಹಶೀಲ್ದಾರ್ ಮೋಹನಕುಮಾರಿ ಎದುರಲ್ಲೇ ಈ ಘಟನೆ ನಡೆದಿದೆ. ಪೊಲೀಸ್ ಕಿವಿ ಕಚ್ಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಪೇದೆ ಕಿವಿ ಕಚ್ಚಿದ ಭೂಪ ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಕ್ವಾರಂಟೈನ್ನಲ್ಲಿಡಲು ಸಮುದಾಯ ಭವನ ಬೇಕಿತ್ತು. ಆದ್ರೆ ಈ ವೇಳೆ ಸಮುದಾಯ ಭವನ ನನ್ನದು ಎಂದು ಕೀ ಕೊಡದೆ ಆರೋಪಿ ಸುರೇಶ ಸತಾಯಿಸಿದ್ದ. ಸಮುದಾಯ ಭವನದ ಕೀ ತನ್ನ ಬಳಿ ಇರಿಸಿಕೊಂಡಿದ್ದು, ಅಧಿಕಾರಿಗಳು ಕೇಳಿದ್ರೆ ಕೊಡದೆ ಮೊಂಡುತನ ಪ್ರದರ್ಶಿಸಿದ್ದನು. ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ ಸುರೇಶನ ಮೇಲೆ ಅಧಿಕಾರಿಗಳು ಕೋಪಗೊಂಡಿದ್ದರು.
ತಹಶೀಲ್ದಾರ್ ಮೋಹನಕುಮಾರಿಯಿಂದ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿದೆ.