ವಿಜಯಪುರ: ಕೌಟುಂಬಿಕ ಕಲಹ ವಿಚಾರವಾಗಿ ತನ್ನ ಮನೆಯ ಸದಸ್ಯರನ್ನು ವ್ಯಕ್ತಿವೋರ್ವ ಕಬ್ಬಿಣದ ರಾಡ್ನಿಂದ ಮನಬಂದಂತೆ ಥಳಿಸಿದ್ದಾನೆ.
ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದರಾಮಪ್ಪ ಮುಳಸಾವಳಗಿ ಹಲ್ಲೆ ಮಾಡಿದಾತ. ಮನೆಯಲ್ಲಿನ ಕಲಹದಿಂದ ಬೇಸತ್ತು ಈ ರೀತಿ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ.
ಸಿದ್ದರಾಮಪ್ಪ ತಂದೆ ದತ್ತಪ್ಪ, ತಾಯಿ ರೇವಮ್ಮ, ಪತ್ನಿ ರೇಣುಕಾ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್ಗೆ ಅಪಘಾತ: 10 ಮಂದಿ ಸಾವು, 25 ಜನರಿಗೆ ಗಾಯ