ವಿಜಯಪುರ: ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಅಟೋಗೆ ತುಂಬಿಸುತ್ತಿದ್ದಾಗ ದಾಳಿ ನಡೆಸಿದ ಜಿಲ್ಲಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಅಕ್ರಮ ಸಿಲಿಂಡರ್ ಮಾರಾಟಗಾರರ ಮೇಲೆ ದಾಳಿ: ಓರ್ವನ ಬಂಧನ - Man arrested
ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಅಟೋಗೆ ತುಂಬಿಸುತ್ತಿದ್ದಾಗ ದಾಳಿ ನಡೆಸಿದ ಜಿಲ್ಲಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು 1.28 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
![ಅಕ್ರಮ ಸಿಲಿಂಡರ್ ಮಾರಾಟಗಾರರ ಮೇಲೆ ದಾಳಿ: ಓರ್ವನ ಬಂಧನ illegal sales of cylinder](https://etvbharatimages.akamaized.net/etvbharat/prod-images/768-512-9078809-729-9078809-1602035896091.jpg)
ಅಕ್ರಮ ಸಿಲಿಂಡರ್ ಮಾರಾಟಗಾರರ ಮೇಲೆ ದಾಳಿ: ಓರ್ವನ ಬಂಧನ
ಇಂಡಿ ರಸ್ತೆಯ ಕಲ್ಲಮೇಶ ಚನ್ನಪ್ಪ ಆಳೂರ ಬಂಧಿತ ಆರೋಪಿ. ಈತ ವಿಜಯಪುರದ ಜ್ಯೋತಿ ಫ್ಯಾಕ್ಟರಿ ಹಿಂಬದಿಯ ಶೆಡ್ನಲ್ಲಿ ಅನಧಿಕೃತವಾಗಿ ಅಟೋಗಳಿಗೆ ಸಿಲಿಂಡರ್ ತುಂಬುತ್ತಿದ್ದ. ಗೃಹಪಯೋಗಿ 25 ಸಿಲಿಂಡರ್, ವಾಣಿಜ್ಯ ಬಳಕೆಯ 21, ಗ್ಯಾಸ್ ತುಂಬಲು ಬಳಸುವ ಯಂತ್ರ ಹಾಗೂ ಪೈಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ 1.28 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಅನುಪಮ್ ಅಗರವಾಲ್ ಶ್ಲಾಘಿಸಿದ್ದಾರೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.