ವಿಜಯಪುರ:ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್ ಗೆಲುವು ಸಾಧಿಸುತ್ತಿದ್ದಂತೆಯೇ ನಗರದಲ್ಲಿ ಸಂಚರಿಸಿ ತಲ್ವಾರ್ ಪ್ರದರ್ಶನ ಮಾಡಿದ ಆರೋಪದಡಿ ಯುವಕನನ್ನು ಭಾನುವಾರ ರಾತ್ರಿ ವಿಜಯಪುರ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ನಗರ ನಿವಾಸಿ ರಾಜಕುಮಾರ ಹಳ್ಳದಮನಿ (28) ಬಂಧಿತ ಆರೋಪಿ.
ವಿಜಯಪುರ: ವಿಜಯೋತ್ಸವದಲ್ಲಿ ತಲ್ವಾರ್ ಪ್ರದರ್ಶಿಸಿದ್ದ ವ್ಯಕ್ತಿ ಬಂಧನ - bijapura news
ತಲ್ವಾರ್ ಕೈಯಲ್ಲಿ ಹಿಡಿದುಕೊಂಡು ರಸ್ತೆ ಮೇಲೆ ಸಂಭ್ರಮಾಚರಣೆ ಮಾಡಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್ ಚುನಾವಣೆಯಲ್ಲಿ ಜಯ ಗಳಿಸುತ್ತಿದ್ದಂತೆ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಲು ಶ್ರೀ ಸಿದ್ದೇಶ್ವರ ದೇವಸ್ಥಾನ ಬಳಿ ಜಮಾಯಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಬಳಿಕ ರ್ಯಾಲಿ ನಡೆಸಿದರು. ಯತ್ನಾಳ್ ಅಭಿಮಾನಿ ಎನ್ನಲಾದ ರಾಜಕುಮಾರ ತಲ್ವಾರ್ ಕೈಯಲ್ಲಿ ಹಿಡಿದುಕೊಂಡು ರಸ್ತೆ ಮೇಲೆ ಸುತ್ತುತ್ತ ಸಂಭ್ರಮಾಚರಣೆ ಮಾಡಿರುವುದು ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುವ ಮೂಲಕ ಸದ್ದು ಮಾಡಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಹಿಂದಿದೆ ಪ್ರಶಾಂತ್ ಕಿಶೋರ್ ತಂಡದಲ್ಲಿದ್ದ ಚಾಣಾಕ್ಷನ ಪ್ಲಾನ್