ವಿಜಯಪುರ :ಕೊರೊನಾ ಭೀತಿ ಹಿನ್ನೆಲೆ ಅನುಸರಿಸಲಾಗುತ್ತಿದ್ದ ಲಾಕ್‌ಡೌನಿಂದ ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ನಗರದ ಮಾಲ್‌ಗಳು ಇಂದಿನಿಂದ ಮತ್ತೆ ಆರಂಭಗೊಂಡಿವೆ.
ಲಾಕ್ಡೌನ್ನಿಂದ ಲಾಕ್ ಆಗಿದ್ದ ಮಾಲ್‌ಗಳು ಇಂದಿನಿಂದ ಆರಂಭ.. - Vijayapura Malls inaugurated
ಮಾಲ್‌ಗಳ ಸಿಬ್ಬಂದಿ ಸ್ಯಾನಿಟೈಸರ್ ನೀಡಿ ಸುರಕ್ಷತೆ ಕಾಪಾಡುವುದರ ಗ್ರಾಹಕರ ಮಾಹಿತಿ, ಫೋನ್ ನಂಬರ್ ತೆಗೆದುಕೊಂಡು ಸ್ಕ್ರೀನಿಂಗ್ ಮಾಡಿದ ನಂತರವೇ ಶಾಪಿಂಗ್ ಮಾಡಲು ಅವಕಾಶ.
ಸರ್ಕಾರ ಮರು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ನಗರದ ಬಿಎಲ್‌ಡಿ ರಸ್ತೆಯಲ್ಲಿರುವ ಪಾಟೀಲ್ ಪ್ಯಾನೇಟ್, ರಿಲಯನ್ಸ್ ಸೇರಿ 10ಕ್ಕೂ ಅಧಿಕ ಮಾಲ್‌ಗಳು ತೆರೆದು ಶಾಪಿಂಗ್ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿವೆ. ಸರ್ಕಾರದ ನಿಯಮಾನುಸಾರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ.
ಕೊರೊನಾ ಭೀತಿಯಿಂದ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಮಾಲ್‌ಗಳತ್ತ ಮುಖ ಮಾಡುತ್ತಿಲ್ಲ. ಶಾಪಿಂಗ್ ಮಾಡಲು ಬರುವ ಗ್ರಾಹರಿಗೆ ಮಾಲ್‌ಗಳ ಸಿಬ್ಬಂದಿ ಸ್ಯಾನಿಟೈಸರ್ ನೀಡಿ ಸುರಕ್ಷತೆ ಕಾಪಾಡುವುದರ ಜೊತೆಗೆ ಅವರ ಮಾಹಿತಿ, ಫೋನ್ ನಂಬರ್ ತೆಗೆದುಕೊಂಡು ಸ್ಕ್ರೀನಿಂಗ್ ಮಾಡಿದ ನಂತರವೇ ಶಾಪಿಂಗ್ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ.