ಕರ್ನಾಟಕ

karnataka

ETV Bharat / state

ಭೀಮಾ ತೀರದಲ್ಲಿ ಗುಂಡಿನ ದಾಳಿ: ಮಹಾದೇವ ಸಾಹುಕಾರ ಸಹಚರ ಬಾಬುರಾವ್ ಸಾವು - Vijayapura Firing news

ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಕಾರಿನ ಮೇಲೆ ದುಷ್ಕರ್ಮಿಗಳು ಅರಕೇರಿ ತಾಂಡದ ಬಳಿ ಗುಂಡಿನ ದಾಳಿ ನಡೆಸಿದ್ದು, ಇದೀಗ ಸಹಚರ ಬಾಬುರಾವ್ ಮೃತಪಟ್ಟಿದ್ದಾರೆ.

mahadeva sahukara Companion death suspicious
ಮಹಾದೇವ ಸಾಹುಕಾರ ಸಹಚರ

By

Published : Nov 2, 2020, 6:14 PM IST

Updated : Nov 2, 2020, 7:17 PM IST

ವಿಜಯಪುರ: ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡನ ಸಹಚರ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಇಂದು ಮಧ್ಯಾಹ್ನ ಮಹಾದೇವ ಸಾಹುಕಾರ ಭೈರಗೊಂಡ ಕಾರಿನ ಮೇಲೆ ದುಷ್ಕರ್ಮಿಗಳು ಅರಕೇರಿ ತಾಂಡದ ಬಳಿ ಗುಂಡಿನ ದಾಳಿ ನಡೆಸಿದ್ದರು. ಬಳಿಕ ತೀವ್ರ ಗಾಯಗೊಂಡ ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಸಹಚರ ಬಾಬುರಾವ್ ಮೃತರಾಗಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಭೀಮಾ ತೀರದ ಮಹಾದೇವ ಸಾಹುಕಾರ ಮೇಲೆ ಗುಂಡಿನ ದಾಳಿ

ಇನ್ನು ಮಹಾದೇವ ಸಾಹುಕಾರ ಭೈರಗೊಂಡ ಭುಜದ ಹಿಂಭಾಗಕ್ಕೆ ಗುಂಡು ತಾಗಿ ಹೊಟ್ಟೆಯಿಂದ ಹೊರ‌ ಹೋಗಿದ್ದು, ಇನ್ನೋರ್ವ ಸಹಚರ ಹುಸೇನಿ ಭಜಂತ್ರಿ ತಲೆಗೂ ಗುಂಡು ತಾಗಿದೆ ಎನ್ನಲಾಗುತ್ತಿದೆ. ಗುಂಡಿನ ದಾಳಿಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡನ ಕಾರು ಚಾಲಕನ ಕಾಲಿಗೆ ತೀವ್ರ ಗಾಯವಾಗಿತ್ತು ಎಂದು ತಿಳಿದು ಬಂದಿದ್ದು, ಈಗಾಗಲೇ ಮಹಾದೇವ ಸಾಹುಕಾರ ಹಾಗೂ ಆತನ ಸಹಚರರು ದಾಖಲಾದ ಬಿಎಲ್‌ಡಿಇ ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

Last Updated : Nov 2, 2020, 7:17 PM IST

ABOUT THE AUTHOR

...view details