ಕರ್ನಾಟಕ

karnataka

ETV Bharat / state

ಮಹಾದೇವ ಸಾಹುಕಾರ ಕೊಲೆ ಯತ್ನ ಪ್ರಕರಣ : ಮತ್ತೆ ಇಬ್ಬರ ಬಂಧನ - ಮಹಾದೇವ ಸಾಹುಕಾರ ಕೊಲೆ ಯತ್ನ ಆರೋಪಿಗಳ ಬಂಧನ

ಮಹಾದೇವ ಸಾಹುಕಾರ ಭೈರಗೊಂಡನ ಕೊಲೆ ಯತ್ನ ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೆ 23 ಜನರ ಬಂಧನವಾಗಿದೆ.

Mahadeva Sahukar Murder attempt caseUpdate
ಮಹಾದೇವ ಸಾಹುಕಾರ ಕೊಲೆ ಯತ್ನ ಪ್ರಕರಣ

By

Published : Nov 17, 2020, 8:24 PM IST

ವಿಜಯಪುರ : ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ ಭೈರಗೊಂಡನ ಕೊಲೆ ಯತ್ನ ಹಾಗೂ ಆತನ ಅಂಗರಕ್ಷಕ, ಕಾರು ಚಾಲಕನ ಕೊಲೆ ಪ್ರಕರಣಕ್ಕೆ ಬಂಧಿಸಿದಂತೆ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವಿಜಯಪುರ ನಗರದ ಮಹೇಶ ಅರ್ಜುನ ಸಾಳುಂಕೆ (26) ಹಾಗೂ ವಜ್ರಹನುಮಾನ ಗೇಟ್ ಹತ್ತಿರದ ಜೈ ಪ್ರಕಾಶ ಸ್ಕೂಲ್ ಬಳಿಯ ನಿವಾಸಿ ಬಾಬು ನಿಂಗನೌಡ ಬಿರಾದಾರ (23) ಎಂದು ಗುರುತಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಒಂದು ಆಟೋ ರಿಕ್ಷಾ, ಒಂದು ಮೊಬೈಲ್ ಹಾಗೂ ತಲವಾರು ವಶ ಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗರ್​ವಾಲ್ ಮಾಹಿತಿ ನೀಡಿದ್ದಾರೆ.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಒಟ್ಟು 23 ಜನರನ್ನು ಬಂಧಿಸಲಾಗಿದೆ.

ABOUT THE AUTHOR

...view details