ಕರ್ನಾಟಕ

karnataka

ETV Bharat / state

ಮಾದಿಗ, ಚಲವಾದಿ ಸಮುದಾಯ ಜನರ ಮೇಲೆ ನಿಲ್ಲದ ದೌರ್ಜನ್ಯ:ಜಿಲ್ಲಾಧಿಕಾರಿಗೆ ಮನವಿ - ವಿಜಯಪುರದಲ್ಲಿ ಮಾದಿಗರ ಮೇಲೆ ಹಲ್ಲೆ

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಮಾದಿಗ, ಚಲವಾದಿ ಸಮುದಾಯಗಳ ಜನರ ನಿಂದನೆ ಹಾಗೂ ಅವರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು,ಇದರ ವಿರುದ್ಧ ಕ್ರಮ ಜರುಗಿಸುವಂತೆ ಚಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ಕಾರ್ಯಕರ್ತರು ಡಿಸಿಯವರಿಗೆ ಮನವಿ ಸಲ್ಲಿಸಿದರು‌.

madiga chalavadi community people appeal to dc
ಜಿಲ್ಲಾಧಿಕಾರಿಗೆ ಮನವಿ

By

Published : Sep 2, 2020, 4:53 PM IST

ವಿಜಯಪುರ: ಚಲವಾದಿ ಮತ್ತು ಮಾದಿಗ ಸಮುದಾಯದ ಜನರ ಮೇಲಿನ ಹಲ್ಲೆ ತಡೆಗಟ್ಟಲು ಕ್ರಮಕ್ಕೆ ಮುಂದಾಗುವಂತೆ ಕರ್ನಾಟಕ ರಾಜ್ಯ ಚಲವಾದಿ ಹಾಗೂ ಮಾದಿಗ ಸಮನ್ವಯ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌.

ಜಿಲ್ಲಾಧಿಕಾರಿಗೆ ಮನವಿ
ಇತ್ತೀಚಿನ ದಿನಗಳಲ್ಲಿ ಮಾದಿಗ, ಚಲವಾದಿ ಸಮುದಾಯಗಳ ಜನರ ಕೊಲೆ, ಜೀವ ಬೆದರಿಕೆ, ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಸೂಕ್ತ ರಕ್ಷಣೆ ಸಿಗದಂತಾಗಿದೆ. ಕಳೆದ ಒಂದು ವಾರದ ಹಿಂದೆ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಮಾದಿಗ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವು ಪ್ರಕರಣಗಳು ವರದಿಯಾಗುತ್ತಿದ್ದು ಜಿಲ್ಲಾಡಳಿತ ಇದೆಲ್ಲದ್ದಕ್ಕೂ ಕಡಿವಾಣ ಹಾಕಲು ಮುಂದಾಗುವಂತೆ ಒತ್ತಾಯಿಸಿದ್ರು.ಇನ್ನೂ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಕೆಲವು ಜನ್ರು ಕುಡಿದ ಮತ್ತಿನಲ್ಲಿ ದಲಿತ ಯುವಕರಿಗೆ ನಿಂದನೆ ಮಾಡುತ್ತಿದ್ದಾರೆ. ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಸಮನ್ವಯ ಸಮಿತಿ ಕಾರ್ಯಕರ್ತರು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಮಾದಿಗ ಹಾಗೂ ಚಲವಾದಿ ಸಮುದಾಯಗಳ ಕುಂದು ಕೊರೆತೆಗಳ ಸಭೆ ನಡೆಸುವಂತೆ ಒತ್ತಾಯಿಸಿದ್ರು.

ABOUT THE AUTHOR

...view details