ಕರ್ನಾಟಕ

karnataka

By

Published : Mar 24, 2023, 8:51 PM IST

Updated : Mar 24, 2023, 9:49 PM IST

ETV Bharat / state

ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಸೇಡಿನ ರಾಜಕಾರಣ: ಎಂ ಬಿ ಪಾಟೀಲ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷದವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಸಿಬಿಐ, ಇಡಿ ಮೂಲಕ ವಿರೋಧ ಪಕ್ಷದವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಂ ಬಿ ಪಾಟೀಲ ಹೇಳಿದ್ದಾರೆ.

m-b-patil-reaction-on-rahul-gandhi-disqualification-from-mp
ರಾಹುಲ್ ಗಾಂಧಿ ಸಂಸದ ಅನರ್ಹವು ಸೇಡಿನ ರಾಜಕಾರಣವಾಗಿದೆ:ಎಂ ಬಿ ಪಾಟೀಲ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ

ವಿಜಯಪುರ: ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿರುವುದು ಸೇಡಿನ ಕ್ರಮವಾಗಿದೆ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡ್ತೀವಿ, ಇದನ್ನು ಜನರ ಬಳಿ ತೆಗೆದುಕೊಂಡು ಹೋಗ್ತೀವಿ ಎಂದು ಜಿಲ್ಲೆಯ ದೇವರಗೆಣ್ಣೂರು ಗ್ರಾಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಹೇಳಿದ್ದಾರೆ.

ರಾಹುಲ್ ಗಾಂಧೀ ಭಾರತ ಜೋಡೋ ಯಾತ್ರೆ ಮೂಲಕ ಐತಿಹಾಸಿಕ ನಡಿಗೆ ಮಾಡಿದ್ರು, ಅವರ ಜನಪ್ರಿಯತೆ ಹೆಚ್ಚಾಗಿದೆ, ಜನರ ಭಾವನೆ ಅರ್ಥ ಮಾಡಿಕೊಂಡು ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಸೂರತ್ ಕೋರ್ಟ್ 30 ದಿನ ಸಮಯ ಕೊಟ್ಟಿದೆ, ನಿನ್ನೆ ಕೋರ್ಟ್ ಆದೇಶ ಬಂದಿದೆ, ಇಂದು(ಶುಕ್ರವಾರ) ತರಾತುರಿಯಲ್ಲಿ ಅನರ್ಹ ಮಾಡುತ್ತಾರೆ. ಇದು ಅವರ ಹತಾಶ ಭಾವನೆ ತೋರಿಸುತ್ತೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷದವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಸಿಬಿಐ, ಇಡಿ ಮೂಲಕ ವಿರೋಧ ಪಕ್ಷದವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ, ಬೆಲೆಯೇರಿಕೆ ನಿಯಂತ್ರಣ ಮಾಡೋಕೆ ಆಗಲಿಲ್ಲ, ಅಚ್ಛೆ ದಿನ್ ಬರಲಿಲ್ಲ, ಉದ್ಯೋಗ ಸೃಷ್ಟಿಯಾಗಲಿಲ್ಲ, ಬಿಜೆಪಿ ತನ್ನ ವೈಫಲ್ಯ ಮುಚ್ಚಿ ಕೊಳ್ಳಲು ಸಿಬಿಐ, ಇಡಿ, ಐಟಿಗಳಿಂದ ಕ್ರಮ‌‌ ಕೈಗೊಂಡಿದ್ದಾರೆ ಇದು ಬಹಳ ದಿನ ನಡೆಯುವುದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಶೇ 40ರಷ್ಟು ಕಮೀಷನ್ ಆರೋಪ ಎರಡು ವರ್ಷಗಳ ಹಿಂದೆ ಬಂದಿದೆ. ಅವರ ಮೇಲೆ ಯಾಕೆ ಐಟಿ, ಸಿಬಿಐ ರೇಡ್ ಆಗಲಿಲ್ಲ, ವಿರೋಧ ಪಕ್ಷಗಳ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ, ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ, ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡ್ತಿದ್ದಾರೆ, ಈಗ ಸಮಯ ಬಂದಿದೆ. 2023ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸುತ್ತಾರೆ ‌ಎಂದರು.

ಎಂಬಿಪಿ ಶಕ್ತಿ ಪ್ರದರ್ಶನ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಮಹಿಳಾ ಸಮಾವೇಶದ ಮೂಲಕ ಎಂ ಬಿ ಪಾಟೀಲ್ ಶಕ್ತಿ ಪ್ರದರ್ಶನ ಮಾಡಿದ್ದಾರೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದಲ್ಲಿ ಮಹಿಳಾ ಸಮಾವೇಶ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಗ್ರಾಮದ ಲಕ್ಷ್ಮೀ ದೇವಸ್ಥಾನ ಹೊರ ಆವರಣದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಬಲೇಶ್ವರ ತಾಲೂಕಿನ ಮಮದಾಪೂರ ಹೋಬಳಿ ವ್ಯಾಪ್ತಿಯ ಗ್ರಾಮದ ಸಾವಿರಾರು ಸಂಖ್ಯೆಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೃಹ ಲಕ್ಷ್ಮೀ ಕಾರ್ಡ್ ವಿತರಣೆ ಕಾರ್ಯಕ್ರಮ ಹೆಸರಿನಲ್ಲಿ ಮಹಿಳೆಯರಿಗೆ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಎಂಬಿ ಪಾಟೀಲ್ ಪ್ರಚಾರ ಆರಂಭಿಸಿದ್ದಾರೆ. ಎಂ ಬಿ ಪಾಟೀಲ್ ಕುಟುಂಬ ಸದಸ್ಯರು ಸೇರಿದಂತೆ ಬಬಲೇಶ್ವರ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಂ ಬಿ ಪಾಟೀಲ್ ಹಾಗೂ ಅವರ ಪತ್ನಿ ಆಶಾ ಪಾಟೀಲ್ ಅವರನ್ನು ಹೂವಿನ ಸುರಿಮಳೆ ಮೂಲಕ ಮಹಿಳೆಯರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಎಂ ಬಿ ಪಾಟೀಲ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ನಡೆಯುತ್ತಿರುವ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಯೋಜನೆಗಳು, ಬಿಜೆಪಿ ನಾಯಕರು ಭಾಷಣದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?

Last Updated : Mar 24, 2023, 9:49 PM IST

ABOUT THE AUTHOR

...view details