ವಿಜಯಪುರ :ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿಯ ಎನ್‌ಹೆಚ್-50ರಲ್ಲಿ ಲಾರಿ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ವಿಜಯಪುರದಿಂದ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಕ್ಯಾಂಟರ್ ಹಾಗೂ ಹುಬ್ಬಳ್ಳಿಯಿಂದ ವಿಜಯಪುರ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಈ ಅಪಘಾತ ನಡೆದಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕ್ಯಾಂಟರ್ನೊಳಗೆ ಸಿಲುಕಿದ್ದ ಶವಗಳನ್ನು ಹೊರ ತೆಗೆಯುವ ಕಾರ್ಯ ಮಾಡಿದ್ದಾರೆ.