ವಿಜಯಪುರ :ಲಾಕ್‌ಡೌನ್ ಆದೇಶ ಗಾಳಿಗೆ ತೂರಿ ಹಾಲು ತೆಗೆದುಕೊಳ್ಳಲು ಜನರು ಮುಗಿಬಿದ್ದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಲಾಕ್‌ಡೌನ್ ಉಲ್ಲಂಘಿಸಿ ನಡು ರಸ್ತೆಯಲ್ಲಿ ಹಾಲಿಗಾಗಿ ಮುಗಿ ಬಿದ್ದ ಜನರು.. - vijayapura lockdown
ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಹಾಲು ಹಂಚುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ. ಆದರೆ, ಹಾಲು ವಿತರಿಸುವ ಸಿಬ್ಬಂದಿ ಮಾತ್ರ ಲಾಕ್‌ಡೌನ್ ಆದೇಶವನ್ನ ಗಾಳಿ ತೂರಿ ಪಾಲಿಕೆ ಸಿಬ್ಬಂದಿ ನಡು ರಸ್ತೆಯಲ್ಲಿ ಜನರಿಗೆ ಬೇಕಾಬಿಟ್ಟಿ ಹಾಲು ವಿತರಿಸಿದೆ.
ಕಳೆದ 5 ದಿನಗಳಿಂದ ಕೊಳಗೇರಿ ಪ್ರದೇಶ ಹಾಗೂ ಬಡ ಜನರಿಗೆ ಸರ್ಕಾರದಿಂದ ಹಾಲು ವಿತರಣೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಮನೆ ಮನೆಗೆ ತೆರಳಿ ಹಾಲು ಹಂಚುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ನೀಡಲಾಗಿದೆ. ಆದರೆ, ಹಾಲು ವಿತರಿಸುವ ಸಿಬ್ಬಂದಿ ಮಾತ್ರ ಲಾಕ್‌ಡೌನ್ ಆದೇಶವನ್ನ ಗಾಳಿ ತೂರಿ ಪಾಲಿಕೆ ಸಿಬ್ಬಂದಿ ನಡು ರಸ್ತೆಯಲ್ಲಿ ಜನರಿಗೆ ಬೇಕಾಬಿಟ್ಟಿ ಹಾಲು ವಿತರಿಸಿದೆ.
ನಗರದ ಸ್ಟೇಷನ್ ರಸ್ತೆಯ ಸ್ಟೇಡಿಯಂ ಹತ್ತಿರ ಹಾಲು ತುಂಬಿದ ಟ್ರ್ಯಾಕ್ಟರ್ ನಿಲ್ಲಿಸಿ ಜನರಿಗೆ ಹಾಲು ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಭೀತಿ ಇದ್ದರೂ ಜನರು ಮುಖಕ್ಕೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಲಿಗಾಗಿ ಮುಗಿಬಿದ್ದಿದ್ದಾರೆ.