ವಿಜಯಪುರ: ರಾಜ್ಯ ಸರ್ಕಾರದ ರವಿವಾರ ಲಾಕ್‌ಡೌನ್ ಘೋಷಣೆ ಬೆನ್ನಲ್ಲೆ ವಿಜಯಪುರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ರವಿವಾರ ಲಾಕ್‌ಡೌನ್: ವಿಜಯಪುರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ...
ರಾಜ್ಯ ಸರ್ಕಾರದ ರವಿವಾರ ಲಾಕ್‌ಡೌನ್ ಘೋಷಣೆ ಬೆನ್ನಲ್ಲೆ ವಿಜಯಪುರದಲ್ಲಿ ಸಂಜೆಯಿಂದ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಅಗತ್ಯ ಸಾಮಗ್ರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದ್ದು, ಈಗಾಗಲೇ ಜಿಲ್ಲಾಡಳಿತ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಇನ್ನು ಸಂಜೆಯಿಂದ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಅಗತ್ಯ ಸಾಮಗ್ರಿ ಖರೀದಿಗೆ ಮುಗಿಬಿದ್ದಿದ್ದಾರೆ. ಇತ್ತ ಸಿದ್ದೇಶ ಮಂದಿರದ ಮುಖ್ಯ ರಸ್ತೆಯಲ್ಲಿ ಕೆಲ ಜನರು ಸಾಮಾಜಿಕ ಅಂತರ ಮರೆತು ರಸ್ತೆಗಿಳಿದ್ದಾರೆ. ಪೊಲೀಸ್ ಇಲಾಖೆಯಿಂದ ನಾಳೆ ಬಂದ್ ಕುರಿತು ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ.
ಇನ್ನು ರಾತ್ರಿ 8 ಗಂಟೆಯಿಂದ ಕರ್ಫ್ಯೂ ಜಾರಿಯಲ್ಲಿರುವ ಕಾರಣ ನಗರ ನಿವಾಸಿಗಳು ದಿನಸಿ ಖರೀದಿಗೆ ಮುಗಿಬಿದ್ದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ರಸ್ತೆ ಜನ ಜಂಗುಳಿಯಿಂದ ಕೂಡಿದ್ದು ಕೆಲವು ಜನರು ಮಾತ್ರ ಮುಖಗವಸು ಧರಿಸದೆ ವಹಿವಾಟಿನಲ್ಲಿ ತೊಡಗಿದ ದೃಶ್ಯಗಳು ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ಕಂಡು ಬರುತ್ತಿವೆ.