ಮುದ್ದೇಬಿಹಾಳ (ವಿಜಯಪುರ):ಲಾಕ್‌ಡೌನ್ ಕೃಷಿ ಚಟುವಟಿಕೆ ಮೇಲೂ ಪರಿಣಾಮ ಬೀರಿದ್ದು, ಮುಂಗಾರು ಆರಂಭಗೊಂಡಿದೆ. ಆದರೆ ರೈತರು ಉಳುಮೆಗೆ ಎತ್ತುಗಳನ್ನು ಹುಡುಕಾಡಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಕ್‌ಡೌನ್ ಘೋಷಣೆಯಾಗುತ್ತಲೇ ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲ ರೀತಿಯ ಸಂತೆಗಳನ್ನು ನಿಲ್ಲಿಸಲಾಗಿತ್ತು. ಕಳೆದ ಎರಡೂವರೆ ತಿಂಗಳಿನಿಂದ ಜಾನುವಾರು ಸಂತೆಯನ್ನು ನಿಲ್ಲಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆ ಆಗಿದ್ದರೂ ಜಾನುವಾರು ಸಂತೆ ನಡೆಯುತ್ತಿಲ್ಲ. ಇದರಿಂದಾಗಿ ರೈತರು ಉಳುಮೆ ಮಾಡಲು ಎತ್ತುಗಳನ್ನು ಹುಡುಕಾಡುವ ದುಃಸ್ಥಿತಿ ಎದುರಾಗಿದೆ.