ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಅಕ್ರಮ ಮದ್ಯ ಸಾಗಾಟ : 10 ಲಕ್ಷ ರೂ. ಮೌಲ್ಯದ ಮದ್ಯ ವಶ, ನಾಲ್ವರ ಬಂಧನ - ನಾಲ್ವರ ಬಂಧನ

ಸದ್ಯ ಆರೋಪಿಗಳಿಂದ 2 ವಾಹನ ಸೇರಿ ಅಂದಾಜು 10,35,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ..

vijaypur
ಅಕ್ರಮ ಮದ್ಯ ಸಾಗಾಟ: 10 ಲಕ್ಷ ರೂ. ಮೌಲ್ಯದ ಮದ್ಯ ವಶ, ನಾಲ್ವರ ಬಂಧನ

By

Published : Oct 31, 2021, 3:20 PM IST

ವಿಜಯಪುರ :ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಮಲ್ಲನಗೌಡ ಪರೀಟ, ದೀಪಕ, ಸಚಿನ್​​ ಹೊಸಮನಿ ಹಾಗೂ ಸತೀಶ್‌ ಕುಮಾರ್ ಕಡುಮೈಲ ಬಂಧಿತ ಆರೋಪಿಗಳು.

ಅಕ್ರಮ ಮದ್ಯ ಸಾಗಾಟ : 10 ಲಕ್ಷ ರೂ. ಮೌಲ್ಯದ ಮದ್ಯ ವಶ, ನಾಲ್ವರ ಬಂಧನ

ವಿಜಯಪುರ ತಾಲೂಕಿನ ಮಿಂಚನಾಳ ಗ್ರಾಮದ ಬಳಿ ಗೋವಾದಿಂದ ತಂದಿದ್ದ 40 ಬಾಕ್ಸ್ ಮದ್ಯವನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಉಪ ಆಯುಕ್ತ ಡಾ. ವೈ ಮಂಜುನಾಥ, ಸೈಯದ್ ಅಫ್ರೀನ್ ಹಾಗೂ ಉಪ ಅಧೀಕ್ಷಕ ವಜ್ಜರಮಟ್ಟಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ 40 ಬಾಕ್ಸ್ ಗೋವಾ ಮದ್ಯ ಹಾಗೂ ಮದ್ಯ ಸಾಗಾಣಿಕೆಗೆ ಬಳಸುತ್ತಿದ್ದ 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ ಆರೋಪಿಗಳಿಂದ 2 ವಾಹನ ಸೇರಿ ಅಂದಾಜು 10,35,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ABOUT THE AUTHOR

...view details