ವಿಜಯಪುರ: ದೇವರಿಗೆ ನೈವೇದ್ಯವಾಗಿ ಭಕ್ತರು, ಹೂ, ಹಣ್ಣು, ಆಹಾರ ಪದಾರ್ಥ ನೀಡುವುದನ್ನು ನಾವೆಲ್ಲಾ ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನೇ ನೈವೇದ್ಯ ಮಾಡಲಾಗುತ್ತದೆ. ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತರು ಸಹ ಮದ್ಯ ಸೇವನೆ ಮಾಡುತ್ತಾರೆ.
ಹೌದು, ತಲ-ತಲಾಂತರಗಳಿಂದಲೂ ನಡೆದುಕೊಂಡು ಬಂದಿರುವ ಬಬಲಾದಿ ಸದಾಶಿವನ ಜಾತ್ರೆಯಲ್ಲಿ ಮದ್ಯವೇ ನೈವೇದ್ಯವಾಗಿರುತ್ತದೆ. ಶಿವರಾತ್ರಿ ಬಳಿಕ ನಡೆಯುವ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನು ಸಮರ್ಪಿಸಲಾಗುತ್ತದೆ. ಹೀಗಾಗಿ, ಈ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಹೇಳಲಾಗುವ ಕಾರ್ಣಿಕ ಯಾವತ್ತೂ ಸುಳ್ಳಾಗಿಯೇ ಇಲ್ಲ. ಮಹಿಳೆಯರು ಕೂಡಾ ಇದನ್ನೇ ನೈವೇದ್ಯವಾಗಿ ಸ್ವೀಕರಿಸಿತ್ತಾರೆ.
ಬೇಡಿಕೆ ಈಡೇರಿದ್ರೆ ತಮ್ಮ ಹರಕೆಯಂತೆ ವಿವಿಧ ಬ್ರಾಂಡ್ಗಳ ಮದ್ಯ ಅರ್ಪಣೆ.. ನೂರಾರು ವರ್ಷಗಳಿಂದ ಇಲ್ಲಿ ಹೇಳುವ ಕಾಲಜ್ಞಾನದ ಹೇಳಿಕೆಗಳು ಸತ್ಯವಾಗುತ್ತಲೇ ಬಂದಿವೆ. ವರ್ಷದ ಮಳೆ, ಬೆಳೆಗಳ ಬಗ್ಗೆ ಬಹುತೇಕ ನಿಖರವಾಗಿ ಹೇಳಿಕೆ ನೀಡುವುದರಿಂದ ರೈತರು ಇದೇ ಹೇಳಿಕೆಯನ್ನ ಆಧರಿಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸದಾಶಿವನ ಸನ್ನಿಧಾನಕ್ಕೆ ಆಗಮಿಸಿ ಯಾವುದಾದ್ರು ಹರಕೆ ಕಟ್ಟಿಕೊಂಡ ಮಹಿಳಾ ಹಾಗೂ ಪುರುಷ ಭಕ್ತರು ಅದು ಈಡೇರಿದ ಬಳಿಕ ತಮ್ಮ ಹರಕೆಯಂತೆ ವಿವಿಧ ಬ್ರ್ಯಾಂಡ್ಗಳ ಮದ್ಯವನ್ನ ದೇವರಿಗೆ ಸಮರ್ಪಿಸುತ್ತಾರೆ.
ಇದನ್ನೂ ಓದಿ:ಗ್ರಾಮದೇವಿ ಜಾತ್ರೆಗಾಗಿ ಊರು ತೊರೆಯುವ ಜನ.. ರಾಜ್ಯದ ಜನರ ಗಮನ ಸೆಳೆಯುತ್ತೆ ಈ ಹೊರವಾರ ಆಚರಣೆ