ವಿಜಯಪುರ :ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಟಿಸಿ ನೀಡಲು ಲಂಚ ಕೊಡುವಂತೆ ರೈತರೊಬ್ಬರಿಗೆ ಲೈನ್ಮ್ಯಾನ್ ಬೇಡಿಕೆ ಇಟ್ಟಿದ್ದು, ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಂಜೀವ ಶಿವಲಿಂಗಪ್ಪ ಅಂಬಿ ಎಂಬುವರನ್ನು ಬಂಧಿಸಿದ್ದಾರೆ.