ವಿಜಯಪುರ: ಸಿಡಿಲು ಬಡಿದು ತಾಯಿ ಹಾಗೂ ಮಗಳು ಸಾವನ್ನಪ್ಪಿ, ಪತಿಗೆ ಗಾಯವಾದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.
ಸಿಡಿಲು ಬಡಿದು ತಾಯಿ-ಮಗಳ ದಾರುಣ ಸಾವು - ಸಿಡಿಲಿಗೆ ತಾಯಿ ಮಗಳು ಸಾವು
ಜಮೀನಿನಿಂದ ವಾಪಸ್ ಮನೆಗೆ ಬರುವ ವೇಳೆ ಸಿಡಿಲು ಬಡಿದು ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಕಡಕೋಳ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.
ತಾಯಿ-ಮಗಳು ಸಾವು
ಮಹಾದೇವಿ ಭಜಂತ್ರಿ (43), ಮಗಳು ಸೋನಿ ಭಜಂತ್ರಿ (12) ಸಿಡಿಲಿಗೆ ಬಲಿಯಾದವರು. ಮಹಾದೇವಿ ಪತಿ ಯಂಕಪ್ಪಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.