ಕರ್ನಾಟಕ

karnataka

ETV Bharat / state

ಶಾಸಕ ಯತ್ನಾಳ್​ ವಿರುದ್ದ ಜೀವ ಬೆದರಿಕೆ ಆರೋಪ: ಏನಿದು ರಾಜಕೀಯ ದ್ವೇಷ? - ವಿಜಯಪುರ ಸುದ್ದಿ

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗವಾಗಿದೆ. ಪಟ್ಟಣಶೆಟ್ಟಿ ಬೆಂಬಲಿಗನಿಗೆ ಶಾಸಕ ಯತ್ನಾಳ್​ ಮತ್ತು ಪಿಎಸ್​ಐ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಪ್ಪು ಪಟ್ಟಣ ಶೆಟ್ಟಿ ಜೊತೆ ಬಾಬು ಜಗದಾಳೆ

By

Published : Nov 3, 2019, 8:49 PM IST

Updated : Nov 3, 2019, 8:55 PM IST

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ರಾಜಕೀಯ ದ್ವೇಷ ಮತ್ತೊಮ್ಮೆ ಬಹಿರಂಗವಾಗಿದೆ.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗ ಬಾಬು ಜಗದಾಳೆ ಎಂಬಾತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಪೊಲೀಸ್ ಅಧಿಕಾರಿವೋರ್ವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿ ಪೋಸ್ಟ್ ಮಾಡಿದ್ದು, ಇದೀಗ ಈ ಪೋಸ್ಟ್ ವೈರಲ್ ಆಗಿದೆ.

ಶಾಸಕರ ವಿರುದ್ಧ ಜೀವ ಬೆದರಿಕೆ ಆರೋಪ

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗನೆಂದು ಗುರುತಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತ ಬಾಬು ಜಗದಾಳೆ ತನ್ನ ಫೇಸ್​ಬುಕ್ ಅಕೌಂಟ್ ನಲ್ಲಿ ಗಾಂಧಿಚೌಕ ಪಿಎಸ್ ಐ ಶರಣಗೌಡ ಹಾಗೂ ಶಾಸಕ ಯತ್ನಾಳ್​ ವಿರುದ್ಧ ಆರೋಪ ಮಾಡಿದ್ದಾನೆ.

ಶಾಸಕ ಯತ್ನಾಳ್​ ಅವರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತನ್ನನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಪಿಎಸ್​ಐ ಶರಣಗೌಡ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಘಾತ ಮಾಡಿಸುವುದಾಗಿ ಹೆದರಿಸಿದ್ದಾರೆ ಎಂದು ಜಗದಾಳೆ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕರ ವಿರುದ್ಧ ಜೀವ ಬೆದರಿಕೆ ಆರೋಪ

ಇದಲ್ಲದೇ ಶಾಸಕ ಯತ್ನಾಳ್ ಅವರ ಕಾರ್ಯವೈಖರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಬಾಬು ಜಗದಾಳೆ ಪೋಸ್ಟ್ ಮಾಡುತ್ತಿದ್ದರು. ಸದ್ಯ ಬಾಬು ಜಗದಾಳೆ ಎಫ್​ಬಿ ಯಲ್ಲಿ ಹಾಕಿರುವ ಪೋಸ್ಟ್​ಗಳು ಫುಲ್ ವೈರಲ್ ಆಗಿದ್ದು, ವಿಜಯಪುರ ಜಿಲ್ಲಾ ಬಿಜೆಪಿಯ ಆಂತರಿಕ ಕಚ್ಚಾಟ ಈ ಮೂಲಕ ಮತ್ತೊಮ್ಮೆ ಬಯಲಾಗಿದೆ.

Last Updated : Nov 3, 2019, 8:55 PM IST

ABOUT THE AUTHOR

...view details