ವಿಜಯಪುರ:ಜೀವಬೆದರಿಕೆ ಹಿನ್ನೆಲೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರ ಮನೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಜೀವಬೆದರಿಕೆ ಹಿನ್ನೆಲೆ ಶಾಸಕ ನಡಹಳ್ಳಿ ಮನೆಗೆ ಖಾಕಿ ಸರ್ಪಗಾವಲು - kannada news
ಜೀವಬೆದರಿಕೆ ಹಿನ್ನೆಲೆ ಶಾಸಕ ಎ.ಎಸ್.ನಡಹಳ್ಳಿ ಮನೆಗೆ ಖಾಕಿ ಸರ್ಪಗಾವಲು. ಓರ್ವ ಎಎಸ್ಐ, 4 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಅಧಿಕಾರಿಯನ್ನು ನೀಯೋಜಿಸಲಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಬೆಳಗ್ಗೆ ಕರ್ತವ್ಯದಲ್ಲಿದ್ದರೆ, ಇನ್ನಿಬ್ಬರು ರಾತ್ರಿ ವೇಳೆ ಮನೆಗೆ ಭದ್ರತೆ ನೀಡುತ್ತಿದ್ದಾರೆ.
ಜಿಲ್ಲೆಯ ಖಾಸಗಿ ಹೋಟೆಲ್ನಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ ಅವರು ನೀರಾವರಿ ಕಾಮಗಾರಿಯಲ್ಲಿ ನಡೆದಿದ್ದ ಭ್ರಷ್ಟಾಚಾರ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದರು. ಇದೇ ವೇಳೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಬೆಂಬಲಿಗರು ಎನ್ನಲಾದ ಕೆಲವರು ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಕೋಣೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅಷ್ಟೆ ಅಲ್ಲದೆ ಅವರಿಗೆ ಜೀವಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ.
ಈ ಹಿನ್ನೆಲೆ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಹಾಗಾಗಿ ಎ.ಎಸ್.ಪಾಟೀಲ್ ನಡಹಳ್ಳಿಗೆ ಓರ್ವ ಎಎಸ್ಐ, 4 ಮಂದಿ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಅಧಿಕಾರಿಯನ್ನು ನೀಯೋಜಿಸಲಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಬೆಳಗ್ಗೆ ಕರ್ತವ್ಯದಲ್ಲಿದ್ದರೆ, ಇನ್ನಿಬ್ಬರು ರಾತ್ರಿ ವೇಳೆ ಮನೆಗೆ ಭದ್ರತೆ ನೀಡುತ್ತಿದ್ದಾರೆ.