ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಗಾಂಜಾ ಮಾರಾಟ ತಡೆಯಲು ಆಗ್ರಹಿಸಿ ಸಿಎಂಗೆ ಪತ್ರ - ವಿಜಯಪುರ ಮಹಾನಗರ ಪಾಲಿಕೆ ಮಾಜಿ ಕಾರ್ಪೊಟರ್ ಪ್ರಕಾಶ ಎಸ್. ಮಿರ್ಜಿ ಪತ್ರ

ವಿಜಯಪುರ ನಗರದ ಹರಣಶಿಕಾರಿಗಲ್ಲಿ, ಜುಮ್ಮಾ ಮಸೀದಿ, ಜೈಲ್ ದರ್ಗಾದ ಹತ್ತಿರ ಇರುವ ಬಾಟರ್ ಗಲ್ಲಿ, ಜೋಳದ ಬಜಾರ ಹಾಗೂ ನವಬಾಗ ಗಲ್ಲಿ ಸೇರಿದಂತೆ ಹಲವೆಡೆ ಗಾಂಜಾ ಮಾರಾಟವಾಗುತ್ತಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಮಾಜಿ ಕಾರ್ಪೊಟರ್ ಪ್ರಕಾಶ ಎಸ್. ಮಿರ್ಜಿ ಆರೋಪಿಸಿದ್ದಾರೆ.

cm and corporator
cm and corporator

By

Published : Sep 7, 2020, 3:22 PM IST

ವಿಜಯಪುರ:ಐತಿಹಾಸಿಕ ಗುಮ್ಮಟನಗರಿಯಲ್ಲಿ ಅವ್ಯವಹಾತವಾಗಿ ಗಾಂಜಾ ಮಾರಾಟವಾಗುತ್ತಿದೆ ಈ ಮಾದಕ ಪದಾರ್ಥದ ಮಾರಾಟಕ್ಕೆ ಬ್ರೇಕ್ ಹಾಕಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆ ಮಾಜಿ ಕಾರ್ಪೊಟರ್ ಪ್ರಕಾಶ ಎಸ್. ಮಿರ್ಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವಿಜಯಪುರ ನಗರದ ಹರಣಶಿಕಾರಿಗಲ್ಲಿ, ಜುಮ್ಮಾ ಮಸೀದಿ, ಜೈಲ್ ದರ್ಗಾದ ಹತ್ತಿರ ಇರುವ ಬಾಟರ್ ಗಲ್ಲಿ, ಜೋಳದ ಬಜಾರ ಹಾಗೂ ನವಬಾಗ ಗಲ್ಲಿ ಸೇರಿದಂತೆ ಹಲವೆಡೆ ಗಾಂಜಾ ಮಾರಾಟವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಾಜಿ ಕಾರ್ಪೊಟರ್ ಪ್ರಕಾಶ ಎಸ್. ಮಿರ್ಜಿ

ಗಾಂಜಾ ಮಾಫಿಯಾ ತಡೆಯುವ ಕುರಿತು ಎಸ್​ಪಿಯವರಿಗೆ ಮನವಿ ಮಾಡಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಪ್ರಕಾಶ ಎಸ್. ಮಿರ್ಜಿ ಪತ್ರ

ಸಿಎಂ ಯಡಿಯೂರಪ್ಪ ತಕ್ಷಣವೇ ವಿಜಯಪುರ ಪೊಲಿಸರಿಗೆ ಗಾಂಜಾ ಮಾರಾಟ ತಡೆಯುವಂತೆ ನಿರ್ದೇಶನ ನೀಡುವಂತೆ ಪ್ರಕಾಶ ಮಿರ್ಜಿ ಮನವಿಯಲ್ಲಿ ಬರೆದುಕೊಂಡಿದ್ದಾರೆ.

ಸಿಎಂ ಕಚೇರಿಯಿಂದ ಪತ್ರ

ಮನವಿ ಸಿಎಂ ಕಚೇರಿಯಲ್ಲಿ ಸ್ವೀಕೃತಿ ಆಗಿದ್ದು ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂಬ ಮೊಬೈಲ್ ಸಂದೇಶ ಕೂಡಾ ಬಂದಿದೆ.

For All Latest Updates

TAGGED:

ABOUT THE AUTHOR

...view details