ಮುದ್ದೇಬಿಹಾಳ:ಎಸ್ಸಿ ಪಟ್ಟಿಯಿಂದ ಸ್ಪರ್ಶ ಜಾತಿಗಳಾದ ಲಂಬಾಣಿ, ಭೋವಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಕೈ ಬಿಡುವಂತೆ ಆಗ್ರಹಿಸಿ ಪಟ್ಟಣದ ನಾಲ್ವರು ದಲಿತ ಮುಖಂಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಸಿಎಂಗೆ ರಕ್ತದಲ್ಲಿ ಪತ್ರ: ಸ್ಪರ್ಶ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡಲು ಆಗ್ರಹ - ಎಸ್ಸಿ
ಮುದ್ದೇಬಿಹಾಳದಲ್ಲಿ ದಲಿತ ಮುಖಂಡ ಪ್ರಶಾಂತ ಕಾಳೆ ಅವರು ರಕ್ತದಲ್ಲಿ ಪತ್ರ ಬರೆದು ಸ್ಪರ್ಶ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡಲು ಆಗ್ರಹಿಸಿದ್ದಾರೆ.
ಸಿಎಂಗೆ ರಕ್ತದಲ್ಲಿ ಪತ್ರ
ಪಟ್ಟಣದ ದಲಿತ ಮುಖಂಡರಾದ ಪ್ರಶಾಂತ ಕಾಳೆ, ಮಂಜುನಾಥ ಕುಂದರಗಿ, ಬಾಲಚಂದ್ರ ದೊಡಮನಿ, ಮಹಾಂತೇಶ ಚಲವಾದಿ ಅವರು ಪತ್ರ ಬರೆದಿದ್ದಾರೆ.
ಈ ಕುರಿತು ಸಿಎಂಗೆ ಬರೆದ ಪತ್ರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ ಸ್ಪರ್ಶ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.