ಕರ್ನಾಟಕ

karnataka

ETV Bharat / state

ಪುನರ್ವಸತಿ ಕೇಂದ್ರದಲ್ಲಿ ಚಿರತೆ ಬಂದು ಹೋಗಿರುವ ಕುರುಹು ಪತ್ತೆ: ಅರಣ್ಯಾಧಿಕಾರಿಗಳಿಂದ ಪರಿಶೀಲನೆ - ಎಮ್ಮೆ ಹಾಗೂ ಎರಡು ಮೇಕೆ ಮೇಲೆ ಚಿರತೆ ದಾಳಿ

ಎಮ್ಮೆ ಹಾಗೂ ಎರಡು ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಜನರು ಕೂಗಿದ್ದು, ಇವರ ಧ್ವನಿ ಕೇಳಿ ಕಬ್ಬಿನ ಜಮೀನುಗಳಲ್ಲಿ ಚಿರತೆ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿ ಪ್ರಶಾಂತ ದೇಸಾಯಿ ಮಾಹಿತಿ ನೀಡಿದ್ದಾರೆ.

Leopard traces found at a rehabilitation center at vijayapura
ಪುನರ್ವಸತಿ ಕೇಂದ್ರದಲ್ಲಿ ಚಿರತೆ ಬಂದ ಕುರುಹಗಳು ಪತ್ತೆ.

By

Published : May 27, 2020, 1:48 PM IST

ವಿಜಯಪುರ: ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಕುರಿತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಲಭ್ಯವಾಗಿದ್ದು, ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಹಾಗೂ ಸುತಗುಂಡಿ ಪುನರ್ವಸತಿ ಕೇಂದ್ರದಲ್ಲಿ ಚಿರತೆ ಕಂಡು ಬಂದ ಕುರುಹುಗಳು ಪತ್ತೆಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಎಮ್ಮೆ ಹಾಗೂ ಎರಡು ಮೇಕೆ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಜನರು ಕೂಗಿದ್ದಾರೆ. ಇವರ ಧ್ವನಿ ಕೇಳಿ ಕಬ್ಬಿನ ಜಮೀನುಗಳಲ್ಲಿ ಚಿರತೆ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿ ಪ್ರಶಾಂತ ದೇಸಾಯಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮಮದಾಪುರ ವಲಯ ಅರಣ್ಯಾಧಿಕಾರಿ ಪ್ರಭು ಹಾಗೂ ಸಿಬ್ಬಂದಿ ಆಗಮಿಸಿ, ಚಿರತೆ ಆಗಮಿಸಿತ್ತಾ ಅಥವಾ ಇಲ್ಲವಾ ಎಂದು‌ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಅರಣ್ಯಾಧಿಕಾರಿಗಳು ಅದನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಅಲ್ಲದೆ ಕತ್ತೆ ಕಿರುಬ ಬಂದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಈ ಕುರಿತು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

For All Latest Updates

ABOUT THE AUTHOR

...view details